ಅದ್ಯಾವುದೇ ಪಾತ್ರ ಕೊಟ್ಟರೂ ಅಚ್ಚುಕಟ್ಟಾಗಿ ಅದನ್ನ ನಿಭಾಯಿಸುವ ನಟರಲ್ಲಿ ಬಹುಭಾಷಾ ನಟ ಕಿಶೋರ್​ ಕೂಡ ಒಬ್ಬರು. ನಾಯಕನಾಗಿಯೂ ಸೈ, ಖಳನಟನಾಗಿಯೂ ಸೈ, ಕಾಮಿಡಿ ಪಾತ್ರಗಳಲ್ಲಿಯೂ ಸೈ.. ಹಾಗೇ ಪೋಷಕ ನಟನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಇದೀಗ ನಟನೆಯ ಜೊತೆಗೆ ಮತ್ತೊಂದು ಪಾತ್ರದತ್ತ ತಮ್ಮ ಚಿತ್ತ ನೆಟ್ಟಿದ್ದಾರೆ ಕಿಶೋರ್​.

ಹೌದು.. ತಮ್ಮದೇ ಪ್ರೊಡಕ್ಷನ್​ ಹೌಸ್​ನಿಂದ ಸಿನಿಮಾ ರೆಡಿ ಮಾಡ್ತಿರುವ ನಟ ಕಿಶೋರ್​, ಸಿನಿಮಾ ನಿರ್ಮಾಣದ ಜೊತೆಗೆ ಈ ಬಾರಿ ನಿರ್ದೇಶಕರಾಗಿಯೂ ತಮ್ಮ ಕೈ ಚಳಕ ತೋರಿಸಲು ಸಜ್ಜಾಗಿದ್ದಾರೆ.ವಿಸ್ತಾರ ಬ್ಯಾನರ್​ನಡಿಯಲ್ಲಿ ಕಥೆಯೊಂದನ್ನ ಕಿಶೋರ್​ ರೆಡಿ ಮಾಡ್ತಿದ್ದಾರೆ. ಈಗಾಗಲೇ ಈ ಕಥೆಯ ಫಸ್ಟ್​​ ಡ್ರಾಫ್ಟ್​​ ತಯಾರಾಗಿದ್ದು, ಮುಂದಿನ ಪ್ರೀ-ಪ್ರೊಡಕ್ಷನ್​​ ಕೆಲಸಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.

ಇದೊಂದು ಥ್ರಿಲ್ಲರ್​​ ಜಾನರ್​ ಸಿನಿಮಾ ಅನ್ನೋದು ಸದ್ಯದ ಮಾತು. ಅಂದ್ಹಾಗೇ ಈ ಸಿನಿಮಾ ಕನ್ನಡ ಹಾಗೂ ತಮಿಳಿನಲ್ಲಿ ಬರಲಿದೆ. ಸದ್ಯಕ್ಕೆ ‘ಅಹಾನಿ’ ಅಂತ ಟೈಟಲ್​ ನೀಡಿರೋದಾಗಿ ಹಾಗೂ ಎಲ್ಲಾ ಹೊಸಬರ ಜೊತೆಯೇ ಈ ಸಿನಿಮಾ ಮಾಡ್ತಿರೋದಾಗಿ ನಟ ಕಿಶೋರ್​ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ.

ಇನ್ನು ಕೊನೆಯದಾಗಿ ‘ಫ್ಯಾಮಿಲಿ ಮ್ಯಾನ್’​- ಸೀಸನ್​ 1 ವೆಬ್​ ಸೀರೀಸ್​​ನಲ್ಲಿ ಇನ್​ಸ್ಪೆಕ್ಟರ್​ ಪಾಷಾ ಆಗಿ ಕಾಣಿಸಿಕೊಂಡಿದ್ದ ಕಿಶೋರ್​, ಇದೀಗ ತಮ್ಮದೇ ಬ್ಯಾನರ್​ನಲ್ಲಿ ರೆಡಿಯಾಗ್ತಿರುವ ‘ಬ್ಲ್ಯಾಕ್​ ಆ್ಯಂಡ್​ ವೈಟ್’​ ಸಿನಿಮಾದಲ್ಲಿ ನಟಿಸಿದ್ದಾರೆ. ಪೋಸ್ಟ್​​ ಪ್ರೊಡಕ್ಷನ್​​ ಹಂತದಲ್ಲಿರುವ ಈ ಸಿನಿಮಾ, ಲಾಕ್​ಡೌನ್​ ಕಳೆದ ಮುಂದಿನ ದಿನಗಳಲ್ಲಿ ಒಂದಷ್ಟು ಅಪ್ಡೇಟ್​​ಗಳನ್ನೂ ನೀಡಲಿದೆ.

ಇದನ್ನ ಹೊರತುಪಡಿಸಿ ನಟ ಕಿಶೋರ್​, ನಿರ್ದೇಶಕ ಇಮ್ತಿಯಾಜ್​​ ಅಲಿಯ ವೆಬ್​ ಸೀರೀಸ್​​ ‘ಶೀ’- ಸೀಸನ್​ 2ನಲ್ಲಿ ಬಣ್ಣ ಹಚ್ಚಲಿದ್ದಾರೆ.

The post ನಾಯಕ, ಖಳನಟ, ಪೋಷಕ ನಟನಾಗಿ ಸೈ ಎನಿಸುಕೊಂಡ ಕಿಶೋರ್​​ರ ಹೊಸ ಇನ್ನಿಂಗ್ಸ್ appeared first on News First Kannada.

Source: newsfirstlive.com

Source link