ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈಟ್​​ನಲ್ಲಾದ್ರೂ ವಿರಾಟ್​​ ಕೊಹ್ಲಿ ಶತಕದ ಬರ ನೀಗಿಸಿಕೊಳ್ತಾರೆ ಅನ್ನೋದು ಅಸಂಖ್ಯ ಅಭಿಮಾನಿಗಳ ಆಶಯವಾಗಿದೆ. ಆದ್ರೆ, ಟೀಮ್​ಇಂಡಿಯಾ ನಾಯಕನ ಬಾಲ್ಯದ ಕೋಚ್​ ಅಭಿಪ್ರಾಯ ಗಮನಿಸಿದ್ರೆ ಅಭಿಮಾನಿಗಳ ಕನಸು ಈಡೇರೋದು ಅನುಮಾನ..! ಅಷ್ಟಕ್ಕೂ ಕೊಹ್ಲಿ ಬಾಲ್ಯದ ಕೋಚ್​​ ಹೇಳಿದ್ದೇನು..? ಯಾವ ವಿಚಾರದಲ್ಲಿ ವಿರಾಟ್​ ಎಡವುತ್ತಿದ್ದಾರೆ..?ಇಲ್ಲಿದೆ ನೋಡಿ ಡಿಟೇಲ್ಸ್​.

ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈಟ್​ಗೆ ದಿನಗಣನೆ ಆರಂಭವಾಗಿದ್ದು, ಮಹತ್ವದ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಾಗುತ್ತಿದೆ. ಈಗಾಗಲೇ ಸೌತ್​ ಹ್ಯಾಂಪ್ಟನ್​ ಮೈದಾನದಲ್ಲಿ ಅಭ್ಯಾಸ ಆರಂಭಿಸಿರೋ ಟೀಮ್ ​ಇಂಡಿಯಾ ಚೊಚ್ಚಲ ಟೆಸ್ಟ್​ ಚಾಂಪಿಯನ್​ಶಿಪ್​ ಟ್ರೋಫಿ ಮುಡಿಗೇರಿಸಿಕೊಳ್ಳೋ ಲೆಕ್ಕಾಚಾರದಲ್ಲಿದೆ. ಈಗಾಗಲೇ ಟೆಸ್ಟ್​​ ಚಾಂಪಿಯನ್​ಶಿಪ್​ ನಮ್ಮ ಪಾಲಿನ ವಿಶ್ವಕಪ್​ ಟ್ರೋಫಿ ಎಂದಿರುವ ಹಲವು ಭಾರತೀಯ ಆಟಗಾರರು ಗೆಲುವಿಗಾಗಿ ಶತಾಯುಗತಾಯ ಪ್ರಯತ್ನದಲ್ಲಿದ್ದಾರೆ.

ಆಟಗಾರರೊಂದಿಗೆ ನಾಯಕ ವಿರಾಟ್​ ಕೊಹ್ಲಿ ಕೂಡ ಬಹುದಿನಗಳ ಶತಕದ ಬರ ನೀಗಿಸಿಕೊಳ್ಳೋ ತವಕದಲ್ಲಿದ್ದಾರೆ. ಹಲ ಕ್ರಿಕೆಟಿಗರು ಹಾಗೂ ಏಕ್ಸ್​ಪರ್ಟ್ಸ್​​​ ರೋಸ್​ಬೌಲ್​ ಮೈದಾನದಲ್ಲಿ ಕೊಹ್ಲಿ ಸೆಂಚುರಿ ಇನ್ನಿಂಗ್ಸ್​ ಫಿಕ್ಸ್​ ಎಂದೇ ಭವಿಷ್ಯ ನುಡಿದಿದ್ದಾರೆ. ಆದ್ರೆ ಸ್ವತಃ ಕೊಹ್ಲಿಯ ಬಾಲ್ಯದ ಕೋಚ್​ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್​ನ ಈ ವೇಗಿಯನ್ನ ಕೊಹ್ಲಿ ಸಮರ್ಥವಾಗಿ ಎದುರಿಸ್ತಾರಾ ಅನ್ನೋ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ವಿರಾಟ್ ಆಟದ​​ ಬಗ್ಗೆ ಬಾಲ್ಯದ ಕೋಚ್​ ಕಳವಳ
ಸೌಥಿ ದಾಳಿಯನ್ನ ಎದುರಿಸೋದೆ ಕೊಹ್ಲಿಗೆ ಸವಾಲಾ..?

ಯೆಸ್​​..! ನ್ಯೂಜಿಲೆಂಡ್​ನ ಟ್ರಂಪ್​ ಕಾರ್ಡ್​ ವೇಗಿಯನ್ನ ಕೊಹ್ಲಿ ಸಮರ್ಥವಾಗಿ ಎದುರಿಸ್ತಾರಾ ಅನ್ನೋದೇ ಬಾಲ್ಯದ ಕೋಚ್​​ಗಿರೋ ಕಳವಳ. ಈಗಾಗಲೇ ಟಿಮ್​ ಸೌಥಿ ಇಂಗ್ಲೆಂಡ್​ ಎದುರಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೆರಿಫಿಕ್​ ಪರ್ಫಾಮೆನ್ಸ್​ ನೀಡಿದ್ದಾರೆ. ಇದನ್ನ ಟೀಮ್​ ಇಂಡಿಯಾಗೆ ಎಚ್ಚರಿಕೆಯ ಘಂಟೆ ಎಂದೇ ಹೇಳಲಾಗ್ತಿದೆ. ಅದರ ಬೆನ್ನಲ್ಲೇ ವಿರಾಟ್​ ಬಾಲ್ಯದ ಕೋಚ್​​ ರಾಜ್​ ಕುಮಾರ್​​ ಶರ್ಮಾ ನೀಡಿರುವ ಹೇಳಿಕೆ ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ.

‘ಖಂಡಿತವಾಗಿಯೂ ಕಳವಳ ಮೂಡಿಸಿದೆ’
ವಿರಾಟ್​ ಕೊಹ್ಲಿಗೆ ನಾನೆಲ್ಲಿ ತಪ್ಪು ಮಾಡಿದ್ದೇನೆಂದು ತಿಳಿದಿಲ್ಲ ಎಂದು ಹೇಳುತ್ತಿಲ್ಲ. ಆದ್ರೆ, ಟಿಮ್​ ಸೌಥಿ ಈವರೆಗೆ ಕೊಹ್ಲಿಯನ್ನ 10 ಬಾರಿ ಔಟ್​ ಮಾಡಿದ್ದಾರೆ. ಇದು ಖಂಡಿತವಾಗಿಯೂ ಕಳವಳಕ್ಕೆ ಕಾರಣವಾಗಿದೆ. ಸೌಥಿ ಬೌಲಿಂಗ್​ ಮಾಡುವ ಲೆಂಥ್​​ ನೋಡಿದ್ರೆ, ನೀವು ಆ ಬಾಲ್ ಬಿಡಬೇಕೋ ಅಥವಾ ಆಡಬೇಕೋ ಅನ್ನೋದನ್ನ ಗಮನಿಸಬೇಕು. ಆತ ಉತ್ತಮವಾಗಿ ಬೌಲಿಂಗ್​ ಮಾಡುತ್ತಿದ್ದಾನೆ ಮತ್ತು ಎಸೆತಗಳು ಸ್ವಿಂಗ್​ ಆಗ್ತಿವೆ. ವಿಕೆಟ್​​ಗೆ ಸಹಾಯಕವಾದ ಪಿಚ್​ ಆದ್ರೆ, ಆತ ಆಡಲು ಅಸಾಧ್ಯವಾದ ಬೌಲರ್​ ಆಗಬಲ್ಲ
ರಾಜ್​ಕುಮಾರ್​​ ಶರ್ಮಾ, ಕೊಹ್ಲಿ ಬಾಲ್ಯದ ಕೋಚ್​

ಆಶ್ವರ್ಯವಾದ್ರೂ ನಿಜ. ಕ್ರಿಕೆಟ್​​ನ ಮೂರು ಫಾರ್ಮ್ಯಾಟ್​ಗಳಲ್ಲಿ ಕೊಹ್ಲಿಯನ್ನ ಸೌಥಿ ಹಾಗೆ ಕಾಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಬ್ಬ ಬೌಲರ್​ಗೆ 10 ಬಾರಿ ವಿಕೆಟ್ ಒಪ್ಪಿಸೋದು ಅಂದ್ರೆ ಸಾಮಾನ್ಯದ ಮಾತಲ್ಲ. ಅದರಲ್ಲೂ ಸದ್ಯ ಸೌಥಿಯ ರೆಡ್​ ಹಾಟ್ ಫಾರ್ಮ್​ ಕೂಡ ಈ ಆತಂಕವನ್ನ ಇನ್ನಷ್ಟು ಹೆಚ್ಚಿಸಿದೆ.

ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿ V/S ಸೌಥಿ
ಟೆಸ್ಟ್​ ಮಾದರಿಯಲ್ಲಿ ಈವರೆಗೆ ಟಿಮ್​ ಸೌಥಿಯ 214 ಎಸೆತಗಳನ್ನ ಎದುರಿಸಿರುವ ಕೊಹ್ಲಿ, 169 ಎಸೆತಗಳಲ್ಲಿ ರನ್​ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಉಳಿದಂತೆ ಸೌಥಿ ಎದುರು 109 ರನ್​ಗಳಿಸಿರೋ ಕೊಹ್ಲಿ, 3 ಬಾರಿ ವಿಕೆಟ್​ ಒಪ್ಪಿಸಿದ್ದಾರೆ.

ಟೆಸ್ಟ್​​ ಮಾದರಿಯಲ್ಲಿ ಕಿವೀಸ್​ ವೇಗಿಗೆ 3 ಬಾರಿ ವಿಕೆಟ್​ ಒಪ್ಪಿಸಿರೋ ಕೊಹ್ಲಿ, ಚುಟುಕು ಮಾದರಿಯಲ್ಲಿ ಎದುರಿಸಿರೋ 18 ಎಸೆತಗಳಲ್ಲೇ 1 ಬಾರಿ ಔಟ್​ ಆಗಿದ್ದಾರೆ. ಇನ್ನು, ಏಕದಿನ ಮಾದರಿಯಲ್ಲಿ ಬರೋಬ್ಬರಿ 6 ಬಾರಿ ಔಟ್​ ಆಗಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿ V/S ಸೌಥಿ
ಏಕದಿನ ಮಾದರಿಯಲ್ಲಿ ಸೌಥಿಯ 203 ಎಸೆತಗಳನ್ನ ಎದುರಿಸಿರುವ ಕೊಹ್ಲಿ, 205 ರನ್​ ಕಲೆ ಹಾಕಿದ್ದಾರೆ. ಬ್ಲ್ಯಾಕ್​ಕ್ಯಾಪ್ಸ್​ ಪಡೆಯ ಟ್ರಂಪ್ ಕಾರ್ಡ್​​ ವೇಗಿ ಎದುರು 100.99 ಸ್ಟ್ರೈಕ್​ರೇಟ್​ ಹೊಂದಿರುವ ವಿರಾಟ್​​ 6 ಬಾರಿ ವಿಕೆಟ್​​ ಒಪ್ಪಿಸಿದ್ದಾರೆ.

ಅಂಡರ್​-19 ದಿನದಿಂದಲೂ ಇಬ್ಬರ ನಡುವೆ ಟಫ್​ ವಾರ್​
ರನ್​ ಮಷೀನ್​ಗೆ ಮುಳುವಾಗ್ತಿದ್ಯಾ ಫೇವರಿಟ್​​ ಶಾಟ್​​..?

ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಾತ್ರವಲ್ಲ ಅಂಡರ್​​ 19 ದಿನದಿಂದಲೂ ಈ ಇಬ್ಬರ ನಡುವೆ ಟಫ್​ವಾರ್​ ನಡೆದಿದೆ. ಆದ್ರೆ, ಅಂಡರ್​ 19 ವಿಶ್ವಕಪ್​ ಟೂರ್ನಿ ಸೆಮೀಸ್​​ನಲ್ಲಿ ಸೌಥಿ ಎದುರು ರನ್​ಗಳಿಸಲು ಪರದಾಡಿದ ಕೊಹ್ಲಿ ವಿಕೆಟ್​ ಒಪ್ಪಿಸಿಲ್ಲ. ಆದ್ರೆ, ಅಂದಿನಿಂದಲೂ ಕೊಹ್ಲಿಯ ವಿರುದ್ಧ ಸೌಥಿ ಉತ್ತಮ ಸ್ಟಾರ್ಟಜಿಯನ್ನ ರೂಪಿಸುತ್ತಿದ್ದಾರೆ ಅನ್ನೋದು ಕೂಡ ವಿರಾಟ್​ ಬಾಲ್ಯದ ಕೋಚ್​ ರಾಜ್​ಕುಮಾರ್​ ಶರ್ಮಾರ​ ಮಾತಾಗಿದೆ. ಅದರಲ್ಲೂ ಕೊಹ್ಲಿಯ ಐಕಾನಿಕ್​ ಶಾಟ್​​ ಕವರ್​​ ಡ್ರೈವ್​ ಮೇಲೆಯೇ ಸೌಥಿ ಗೇಮ್​ಪ್ಲಾನ್​ ವರ್ಕೌಟ್​ ಮಾಡೋದಂತೆ.

‘ಕವರ್​​ ಡ್ರೈವ್​ ಆಡೋಕೂ ಮುನ್ನ ಯೋಚಿಸಬೇಕು’
‘ವಿರಾಟ್​​ ಕೊಹ್ಲಿಯ ನೆಚ್ಚಿನ ಕವರ್​ ಡ್ರೈವ್​.. ಸೌಥಿ ಎದುರು ಈ ಶಾಟ್​​ ಪ್ಲೇ ಮಾಡೋಕು ಮುನ್ನ ಕೊಹ್ಲಿ ಯೋಚಿಸಬೇಕು. ಯಾಕಂದ್ರೆ ಈ ಕವರ್​​ ಡ್ರೈವ್​ ಪ್ಲೇ ಮಾಡುವಾಗಲೇ ಸ್ಲಿಪ್​ಗೆ ಕ್ಯಾಚ್​ ನೀಡಿ ಹಲವು ಬಾರಿ ಔಟ್​ ಆಗಿದ್ದಾರೆ’.
-ರಾಜ್​ಕುಮಾರ್​​ ಶರ್ಮಾ, ಕೊಹ್ಲಿ ಬಾಲ್ಯದ ಕೋಚ್​

ಟೆಸ್ಟ್​ ಚಾಂಪಿಯನ್​ಶಿಪ್​ಗೂ ಮುನ್ನ ಕೊಹ್ಲಿಯ ವೀಕ್​ನೆಸ್​​ ಬಗ್ಗೆ ಮಾತನಾಡಿರುವ ಬಾಲ್ಯದ ಕೋಚ್​​ ಈ ಬಾರಿ ಅದು ಮರುಕಳಿಸಲ್ಲ ಅನ್ನೋ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿರಾಟ್​ ವರ್ಕೌಟ್​​​ ಮಾಡಿರುತ್ತಾರೆ. ಹೀಗಾಗಿ ಔಟ್​ ಸೈಡ್​​ ಆಫ್​​ ಸ್ಟಂಪ್​ ಬರುವ ಎಸೆತಗಳನ್ನ ಬಿಡಬಹುದು ಅನ್ನೋದು ರಾಜ್​ಕುಮಾರ್​​ ಶರ್ಮಾ ವಿಶ್ವಾಸವಾಗಿದೆ. ನಿಜಕ್ಕೂ ಕೊಹ್ಲಿ ತಮ್ಮ ವೀಕ್​ನೆಸ್​​ ಸರಿ ಪಡಿಸಿಕೊಳ್ತಾರಾ ಅಥವಾ ಈ ಬಾರಿಯೂ ಸೌಥಿಯೇ ಮೇಲುಗೈ ಸಾಧಿಸ್ತಾರಾ..? ಅನ್ನೋ ಪ್ರಶ್ನೆಗೆ ರೋಸ್​ಬೌಲ್​ ಮೈದಾನದಲ್ಲಿ ಉತ್ತರ ಸಿಗೋದಂತೂ ಖಚಿತ.

The post ನಾಯಕ ವಿರಾಟ್ ಕೊಹ್ಲಿ ಬಗ್ಗೆ ಬಾಲ್ಯದ ಕೋಚ್ ಬಿಚ್ಚಿಟ್ಟರು ಸೀಕ್ರೆಟ್ appeared first on News First Kannada.

Source: newsfirstlive.com

Source link