ಅಮೆರಿಕ: ಮನುಷ್ಯನ ಬೆಸ್ಟ್​​​​ಫ್ರೆಂಡ್​ ಯಾರು ಅನ್ನೋ ಪ್ರಶ್ನೆಯನ್ನ ಕೇಳಿದ್ರೆ ಅದಕ್ಕೆ ಉತ್ತರ ಎಲ್ಲರೂ ಹೇಳೋದು ನಾಯಿ ಅಥವಾ ನಾಯಿಮರಿಗಳು ಅಂತ. ನಿಮ್ಮ ಮನೆಯಲ್ಲೋ ಅಥವ ನಿಮ್ಮ ಸ್ನೇಹಿತರ ಮನೆಯಲ್ಲೋ ನಾಯಿ ಮರಿಗಳು ಅಥವ ನಾಯಿಗಳಿದ್ದರೆ ಅದ್ರೊಂದಿಗೆ ಎಷ್ಟು ಅಟ್ಯಾಚ್​ಮೆಂಟ್​ ಇರುತ್ತೆ ಅನ್ನೋದು ಗೊತ್ತಿರುತ್ತೆ. ಇದೀಗ, ನಾಯಿ ಮರಿಗಳು ಮನುಷ್ಯನ ಮಾತುಗಳನ್ನ ಅರ್ಥ ಮಾಡಿಕೊಳ್ಳುವ ಕೌಶಲ್ಯವನ್ನ ಹುಟ್ಟಿನಿಂದಲೇ ಹೊಂದಿರುತ್ತವೆ ಅನ್ನೋದನ್ನ ವಿಜ್ಞಾನಿಗಳ ತಂಡವೊಂದು ಸಂಶೋಧನೆ ಮಾಡಿ ಸಾಬೀತುಪಡಿಸಿದೆ.

ಅಮೆರಿಕಾದ ಅರಿಜೋನಾ ವಿಶ್ವವಿದ್ಯಾಲಯದ ಸ್ಕೂಲ್​ ಆಫ್ ಆಂತ್ರಪಾಲಜಿಯ ಅರಿಜೋನಾ ಕ್ಯಾನೈನ್​ ಕಾಗ್ನಿಷನ್​ ಸೆಂಟರ್​ನಲ್ಲಿ ಎಮಿಲಿ ಬ್ರೇ ಎಂಬ ವಿಜ್ಞಾನಿಯೊಬ್ಬರು ನಾಯಿ ಮರಿಗಳು  ಮನುಷ್ಯನನ್ನ ಪ್ರೀತಿಸುವ ಹಾಗೂ ಮನುಷ್ಯರ ಜೊತೆ ಮಾತುಕತೆ ಮಾಡೋ ಗುಣಗಳನ್ನ ಹುಟ್ಟಿನಿಂದಲೇ ಹೊಂದಿರುತ್ತವೆ ಅನ್ನೋದನ್ನ ಕಂಡುಹಿಡಿದಿದ್ದಾರೆ.

ಹೌದು.. ನೀವು ಅಬ್ಸರ್ವ್​ ಮಾಡಿ, ಮನುಷ್ಯರ ಮಾತನ್ನ ನಾಯಿ ಮರಿಗಳು ಬೇಗ ಕೇಳುತ್ತವೆ. ಮರಿಗಳು ಹುಟ್ಟಿದಾಗಲೇ, ಅವುಗಳಿಗೆ ಮನುಷ್ಯನ ಮಾತು ಅರ್ಥವಾಗೋ ಸ್ಕಿಲ್ಸ್ ಇರುತ್ತದೆ ಅನ್ನೋದನ್ನ ಬ್ರೇ ಟೀಂ ಕಂಡು ಹಿಡಿದಿದೆ.

ಬ್ರೇ ಹಾಗೂ ಅವರ ತಂಡ,​ 375 ನಾಯಿಮರಿಗಳನ್ನ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಅದರಲ್ಲಿ ಬಹುತೇಕ 8 ವಾರದ ನಾಯಿಮರಿಗಳೇ ಹೆಚ್ಚಾಗಿದ್ದವು. ಇಂಥ ಮರಿಗಳನ್ನ ತಾಯಿಯಿಂದ ದೂರ ಮಾಡಿದ ನಂತರ, ಮರಿಗಳು ಕೇಳೋದೇ ಮನುಷ್ಯನ ಮಾತುಗಳನ್ನ. ಹೀಗಾಗಿ ಮರಿಗಳು, ಒಂದು ಬಾರಿ ಮನುಷ್ಯನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ರೆ ಸಾಕು, ಅವರು ಹೇಳೋದನ್ನ ಅದು ಚಾಚೂ ತಪ್ಪದೇ ಮಾಡುತ್ತೆ ಅನ್ನೋದನ್ನ ಬ್ರೇ ಅವ್ರ ತಂಡ ಕಂಡುಹಿಡಿದಿದೆ. ಅಷ್ಟೇ ಅಲ್ಲದೇ, ಇಂಥ ಟಾಸ್ಕ್​ಗಳು, ದೊಡ್ಡದಾದ ಶ್ವಾನಗಳಿಗೆ ತುಂಬಾ ಸುಲಭ. ಬೇಗ ಮನುಷ್ಯನ ಮಾತನ್ನ ಕೇಳುತ್ತವೆ. ಆದ್ರೆ ಮರಿಗಳು ಇನ್ನೂ ಚಿಕ್ಕವು, ಅದಕ್ಕೆ ತುಂಟಾಟ ಜಾಸ್ತಿ. ಹೀಗಾಗಿ ಮನುಷ್ಯನ ಮಾತನ್ನ ಕೇಳುವಂತೆ ಮರಿಯಿದ್ದಾಗ್ಲೇ ಹೇಳಿಕೊಡಬೇಕು ಅನ್ನೋದನ್ನು ಬ್ರೇರವರ ತಂಡ ಹೇಳಿದೆ.

ಎರಡು ಟಾಸ್ಕ್ ನಡೆಸಿತ್ತು ಸಂಶೋಧಕರ ತಂಡ 
ಲಾಬ್ರೆಡಾರ್​, ಗೋಲ್ಡನ್​ ರಿಟ್ರೀವರ್​ನಂಥಹ ನಾಯಿಮರಿಗಳನ್ನ ಟೆಸ್ಟ್​ಗೆ ಒಳಪಡಿಸಿದ ಈ ತಂಡ, ಅವುಗಳಿಗೆ ಸಂಶೋಧಕರೊಂದಿಗೆ ಐ ಕಾಂಟ್ಯಾಕ್ಟ್​ ಅಂದ್ರೆ ಕಣ್ಣಲ್ಲಿ ಕಣ್ಣಿಟ್ಟು ನೋಡೋದನ್ನ ಹೇಳಿಕೊಟ್ಟಿದ್ರು. ಇದರ ಜೊತೆಗೆ ಸಂಶೋಧಕರು ಎಲ್ಲೇ ಹೋದ್ರು ಅವರ ಹಿಂದೆ ಹೋಗೋದು, ಅವರ ಕೈ ಹಾಗೂ ಕಣ್ಣುಗಳನ್ನ ನೊಡೋದನ್ನ ಹೇಳಿಕೊಟ್ಟಿದ್ರಂತೆ. ನಾಯಿಮರಿಗಳು ಸೂಚನೆಗಳನ್ನು ಯಶಸ್ವಿಯಾಗಿ ಅನುಸರಿಸಲು ಸಮರ್ಥವಾಗಿದ್ದವು. ಮತ್ತು ಯಾವುದೇ ತರಬೇತಿ ಇಲ್ಲದೆಯೂ, ಅಡಗಿಸಿಟ್ಟಿದ್ದ ಟ್ರೀಟ್​ಗಳನ್ನ ತಾವಾಗಿಯೇ ಹುಡುಕಿಕೊಂಡವು ಎನ್ನಲಾಗಿದೆ. ನಾಯಿಗಳು ಮನುಷ್ಯರೊಂದಿಗೆ ಸುಲಭವಾಗಿ ಸಂವಹನ ಮಾಡುತ್ತವೆ ಅನ್ನೋದನ್ನ ಇದು ಸೂಚಿಸುತ್ತದೆ ಎನ್ನುತ್ತಾರೆ ತಜ್ಞರು.

The post ನಾಯಿಮರಿಗಳಿಗೆ ಹುಟ್ಟಿನಿಂದಲೇ ಇರುತ್ತಂತೆ ಈ ಗುಣ, ಪರೀಕ್ಷಿಸಿ ನೋಡಿ appeared first on News First Kannada.

Source: newsfirstlive.com

Source link