ನಾಯಿ ವಿಚಾರಕ್ಕೆ ಆರಂಭವಾದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯ


ಚಿತ್ರದುರ್ಗ: ನಾಯಿ ವಿಚಾರಕ್ಕೆ ಗಲಾಟೆ ಆರಂಭವಾದ ಗಲಾಟೆ ಯುವಕನೊರ್ವನ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆ ಗ್ರಾಮದಲ್ಲಿ ನಡೆದಿದೆ.

ಜಾಲಿಕಟ್ಟೆ ಗ್ರಾಮದ 23 ವರ್ಷದ ಮಹಾಂತೇಶ್ ಕೊಲೆಯಾದ ದುರ್ದೈವಿಯಾಗಿದ್ದು, ಯುವಕನ ತಲೆಗೆ ಬಡಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ.

ಮೃತ ಮಹಾಂತೇಶ್​​ ಪಕ್ಕದ ಮನೆಯ ಸ್ವಾಮಿ ಎರಡು ಶ್ವಾನಗಳನ್ನು ಸಾಕಿದ್ದರು. ಈ ನಾಯಿಗಳು ಮನೆ ಮುಂದೆ ಗಲೀಜು ಮಾಡುತ್ತೆ ಅಂತ ಮಹಾಂತೇಶ್​​ ಮನೆಯವರು ಗಲಾಟೆ ಆರಂಭಿಸಿದ್ದರು ಎನ್ನಲಾಗಿದೆ. ಈ ನಡುವೆ ಎರಡು ಕುಟುಂಬಗಳ ನಡುವೆ ಜಗಳ ಆಗಿದ್ದು, ಸ್ವಾಮಿ ಕುಟುಂಬಸ್ಥರು ಮಹಾಂತೇಶ್​​ ಮೇಲೆ ಬಡಿಗೆಯಿಂದ ಹಲ್ಲೆ ಮಾಡಿದ್ದರಂತೆ. ಘಟನೆ ಸಂಬಂಧ ಮೃತ ಯುವಕನ ಕುಟುಂಬಸ್ಥರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸ್ವಾಮಿ ಹಾಗೂ ಆತನ ಪತ್ನಿ ಕಮಲಮ್ಮರನ್ನು ಪ್ರಕರಣದಲ್ಲಿ ಪೊಲೀಸರು ಅರೆಸ್ಟ್​​ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಕುರಿತಂತೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News First Live Kannada


Leave a Reply

Your email address will not be published. Required fields are marked *