ನಾರದಮುನಿ ಸ್ವಾಮಿ ರಥೋತ್ಸವ ವೇಳೆ ರಥದ ಚಕ್ರಕ್ಕೆ ಸಿಲುಕಿ ಭಕ್ತ ಸಾವು | A Devotee death by chariot wheel at Naradamuni Swami Rathotsavam


ನಾರದಮುನಿ ಸ್ವಾಮಿ ರಥೋತ್ಸವ ವೇಳೆ ರಥದ ಚಕ್ರಕ್ಕೆ ಸಿಲುಕಿ ಭಕ್ತ ಸಾವು

ನಾರದಮುನಿ ಸ್ವಾಮಿ ರಥೋತ್ಸವ ಜಾತ್ರೆ

ದಾವಣಗೆರೆ: ನಾರದಮುನಿ ಸ್ವಾಮಿ ರಥೋತ್ಸವ ಜಾತ್ರೆ ವೇಳೆ ರಥದ ಚಕ್ರಕ್ಕೆ (Wheel) ಸಿಲುಕಿ ಭಕ್ತ ಸಾವನ್ನಪ್ಪಿರುವಂತಹ ದಾರಣ ಘಟನೆಯೊಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದಿದೆ.  ಸಾವನ್ನಪ್ಪಿರುವ ವ್ಯಕ್ತಿಯ ಹೆಸರು, ವಿಳಾಸ ಇನ್ನೂ ಪತ್ತೆಯಾಗಿಲ್ಲ. ಚಿಗಟೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸಿಡಿಲು ಬಡಿದು ರೈತ ಸಾವು:

ವಿಜಯನಗರ: ಜಮೀನಿನಲ್ಲಿ ಮರದ ಕೆಳಗೆ ನಿಂತಿದ್ದ ರೈತನಿಗೆ ಸಿಡಿಲು ಬಡಿದು ಮೃತಪಟ್ಟಿರುವಂತಹ ಘಟನೆ ಹೂವಿನ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ನಡೆದಿದೆ. ಪಿಂಜಾರ್ ಇಸ್ಮಾಯಿಲ್ ಸಾಬ್ (58) ಮೃತ ರೈತ. ಸಂಜೆ ಸುರಿದ ಮಳೆ ಗಾಳಿಯಿಂದ ಅವಾಂತರ ಸಂಭವಿಸಿದೆ. ಜಿಲ್ಲೆಯ ಇಟಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೈಕ್‌ಗಳ ಮಧ್ಯೆ ಡಿಕ್ಕಿಯಾಗಿ ಐವರಿಗೆ ಗಾಯ:

ಚಿತ್ರದುರ್ಗ: ಬೈಕ್‌ಗಳ ಮಧ್ಯೆ ಡಿಕ್ಕಿಯಾಗಿ ಐವರಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಬಳಿ ನಡೆದಿದೆ. ಬೈಕಿನಿಂದ್ ಬಿದ್ದು ಇಬ್ಬರು ಬಾಲಕರು, ಇಬ್ಬರು ಬಾಲಕಿಯರು ಮತ್ತು ಪೋಷಕರು ಗಾಯಗೊಂಡಿದ್ದು, ಗಾಯಾಳು ಮಕ್ಕಳ ಆಕ್ರಂದನ ಕಂಡು ತಹಸೀಲ್ದಾರ್ ರಘುಮೂರ್ತಿ ಮರುಗಿದ್ದಾರೆ. ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ತಹಸೀಲ್ದಾರ್ ಮಾನವೀಯತೆ ಮೆರೆದಿದ್ದು, ಜೀಪಿನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

ಖಸಾಯಿಖಾನೆಗೆ ಸಾಗಿಸುತ್ತಿದ್ದ 38 ಹಸುಗಳ ರಕ್ಷಣೆ:
ಚಿತ್ರದುರ್ಗ: ಖಸಾಯಿಖಾನೆಗೆ ಸಾಗಿಸುತ್ತಿದ್ದ 38 ಹಸುಗಳನ್ನು ಹೊಸದುರ್ಗದ ಗೌಸಿಯಾ ಬಡಾವಣೆಯ ಪೊಲೀಸರು ದಾಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಘಟನೆ ನಡೆದಿದೆ. ಗೌ ಗ್ಯಾನ್ ಫೌಂಡೇಶನ್ ದೂರಿನ ಹಿನ್ನೆಲೆ ಪೊಲೀಸರ ದಾಳಿ ಮಾಡಿದ್ದು, ಆಜಾದ್ ಬಡಾವಣೆಯಲ್ಲಿ ಹಸು ಮಾಂಸ ಹಾಗೂ ಜಾನುವಾರು ವಶಕ್ಕೆ ಪಡೆದಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಬುಲೇರೋ ವಾಹನ ಪಲ್ಟಿ: 

ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಭತ್ತದ ಗದ್ದೆಯಲ್ಲಿ ಬುಲೇರೋ ವಾಹನ ಪಲ್ಟಿಯಾಗಿರುವಂತಹ ಘಟನೆ ತಾಲೂಕಿನ ಬೆಳವನೂರ ಬಳಿ ನಡೆದಿದೆ. ಸ್ಥಳೀಯರಿಂದ ವಾಹನದಲ್ಲಿದ್ದವರ ರಕ್ಷಣೆ ಮಾಡಲಾಗಿದ್ದು, ನಾಲ್ಕಕ್ಕೂ ಹೆಚ್ಚು ಜನರಿಗೆ ಬಹುತೇಕರಿಗೆ ಸಣ್ಣ ಪುಟ್ಟಗಾಯಗಳಾಗಿವೆ. ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಕಾಂಗ್ರೆಸ್ ‌ಮುಖಂಡ ಬಸವಂತಪ್ಪ ತಮ್ಮ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು‌ ಮಾಡಿದ್ದಾರೆ. ಹದಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗ್ಯಾಸ್ ಟ್ಯಾಂಕರ್​ಗೆ ಸ್ಕೂಟರ್ ಡಿಕ್ಕಿ; ಯುವಕ ಸ್ಥಳದಲ್ಲೇ ಸಾವು:

ಉಡುಪಿ: ಹುಟ್ಟು ಹಬ್ಬದ ಖುಷಿಯಲ್ಲಿದ್ದ ಯುವಕ ಅಪಘಾತಕ್ಕೆ ಬಲಿಯಾಗಿರುವಂತಹ  ಘಟನೆ ನಗರದ ಹೆಜಮಾಡಿ ಟೋಲ್ ಬಳಿ ನಡೆದಿದೆ. ಹೆದ್ದಾರಿ ಮಧ್ಯೆ ನಿಲ್ಲಿಸಿದ ಗ್ಯಾಸ್ ಟ್ಯಾಂಕರ್​ಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಮಲ್ಪೆ ಕೊಡವೂರು ನಿವಾಸಿ ಮಹೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಹೇಶ್​ಗೆ ಇತ್ತೀಚೆಗಷ್ಟೇ ಮದುವೆ ನಿಗದಿಯಾಗಿತ್ತು. ಶುಭಕಾರ್ಯವೊಂದರಲ್ಲಿ ಪಾಲ್ಗೊಂಡು ಮಂಗಳೂರು ಕಡೆಯಿಂದ ತನ್ನ ಸ್ಕೂಟರ್​ನಲ್ಲಿ ತನ್ನ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಹೆದ್ದಾರಿಯ ಮಧ್ಯಭಾಗದಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್​ರನ್ನು ಗಮನಿಸದೆ ಟ್ಯಾಂಕರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV9 Kannada


Leave a Reply

Your email address will not be published. Required fields are marked *