ನಾರದ ಕೇಸ್: ತೃಣಮೂಲ ಕಾಂಗ್ರೆಸ್​ನ 4 ನಾಯಕರಿಗೆ ಜಾಮೀನು

ನಾರದ ಕೇಸ್: ತೃಣಮೂಲ ಕಾಂಗ್ರೆಸ್​ನ 4 ನಾಯಕರಿಗೆ ಜಾಮೀನು

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸದ್ಯ ಭಾರೀ ಚರ್ಚೆಯಲ್ಲಿರುವ ನಾರದ ಹಗರಣದ ವಿಚಾರಣೆ ಇಂದು ಕೊಲ್ಕತ್ತಾ ಹೈಕೋರ್ಟ್​​ನಲ್ಲಿ ನಡೆದಿದ್ದು ತೃಣಮೂಲ ಕಾಂಗ್ರೆಸ್ ನಾಯಕರಾದ ಮಾಜಿ ಸಚಿವ ಫಿರಾದ್ ಹಕೀಮ್, ಸುಬ್ರತಾ ಮುಖರ್ಜೀ, ಸೊವನ್ ಚಟರ್ಜಿ ಹಾಗೂ ಮದನ್ ಮಿತ್ರಾ ಅವರಿಗೆ ಕೋರ್ಟ್​ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಅಲ್ಲದೇ ಆರೋಪಿಗಳಿಂದ ಹೈಕೋರ್ಟ್ 2 ಲಕ್ಷದ ಬೇಲ್ ಬಾಂಡ್ ಪಡೆದುಕೊಂಡಿದೆ. ಇನ್ನು ಬೇಲ್​​ನಲ್ಲಿ ಹೊರಗಿರುವಷ್ಟು ದಿನಗಳು ನ್ಯೂಸ್ ಚಾನೆಲ್​ಗಳಿಗೆ ಸಿಬಿಐ ವಿಚಾರಣೆಗೆ ಸಂಬಂಧಿಸಿದಂತೆ ಯಾವುದೇ ಇಂಟರ್​​ವ್ಯೂ ನೀಡುವಂತಿಲ್ಲ ಎಂದು ಹೇಳಿದೆ. ಇನ್ನು ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕು ಎಂದು ಕೋರ್ಟ್​ ಸೂಚನೆ ನೀಡಿದೆ.

The post ನಾರದ ಕೇಸ್: ತೃಣಮೂಲ ಕಾಂಗ್ರೆಸ್​ನ 4 ನಾಯಕರಿಗೆ ಜಾಮೀನು appeared first on News First Kannada.

Source: newsfirstlive.com

Source link