– ಶಯನಾ ಸೋದರಿ ಜೊತೆ 4ನೇ ಪತಿಯ ಮಂಚದಾಟ

ನವದೆಹಲಿ: ರಾಜಧಾನಿ ದೆಹಲಿಯ ನಿಜಾಮುದ್ದೀನ್ ಇಲಾಖೆಯಲ್ಲಿ ವಾಸವಾಗಿದ್ದ ಡ್ರಗ್ ಕ್ವೀನ್ ಶಯನಾ ಕೊಲೆಯಾಗಿದೆ. ಮಂಗಳವಾರ ಬೆಳಗ್ಗೆ 10.30ಕ್ಕೆ ಶಯನಾ ಆಕೆಯ ನಾಲ್ಕನೇ ಪತಿ ಕೊಲೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳು ಶಯನಾಳನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ಶಯನಾ ರಕ್ಷಣೆಗೆ ಬಂದ ನೌಕರ:
ಶಯನಾ ಕೊಲೆಯ ವಿಷಯ ತಿಳಿಯುತ್ತಿದ್ದಂತೆ ನಿಜಾಮುದ್ದೀನ್ ವ್ಯಾಪ್ತಿಯ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಶಯನಾ ನಾಲ್ಕನೇ ಪತಿ ವಸೀಮ್ ಜೊತೆ ವಾಸವಾಗಿದ್ದರು. ವಸೀಮ್ ಬಳಿ ಎರಡು ಗನ್ ಗಳಿದ್ದು, ಶಯನಾ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಮಧ್ಯೆ ಬಂದ ಮನೆಯ ಕೆಲಸಗಾರ ಶಹದತ್ ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಕೊಲೆಯ ಬಳಿಕ ವಸೀಮ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯ ಸಿಸಿಟಿವಿ ಫೋಟೋಜ್ ದೃಶ್ಯಗಳನ್ನ ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ನಾಲ್ಕು ಮದುವೆಯಾಗಿತ್ತು:
ಶಯಾನಳ ಇಬ್ಬರು ಪತಿಯರು ಈಕೆಯನ್ನ ತೊರೆದು ಬಾಂಗ್ಲಾಗೆ ತೆರಳಿದ್ದಾರೆ. ಇಬ್ಬರಿಂದ ದೂರವಾದ ಶಯನಾ ಡ್ರಗ್ ಕಿಂಗ್ ಶರಾಫತ್ ಶೇಖ್ ಜೊತೆ ಮದುವೆಯಾಗಿದ್ದಳು. ಡ್ರಗ್ ಪ್ರಕರಣದಲ್ಲಿ ಬಂಧಿಯಾಗಿ ಶಯನಾ ಮತ್ತು ಶರಾಫತ್ ತಿಹಾರ ಜೈಲು ಸೇರಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಎನ್‍ಡಿಪಿಎಸ್ ಆ್ಯಕ್ಟ್ ಅಡಿ ಶರಾಫತ್ ನನ್ನು ಪೊಲೀಸರು ಬಂಧಿಸಿದ್ದರು.

ವರ್ಷದ ಹಿಂದೆ ವಸೀಮ್ ಜೊತೆ ಮದುವೆ:
ಮದುವೆ ಬಳಿಕ ಕೆಲವೇ ದಿನಗಳಲ್ಲಿ ಶರಾಫತ್ ಜೈಲು ಸೇರಿದ್ದರಿಂದ ವಸೀಮ್ ಎಂಬಾತನನ್ನು ಮದುವೆಯಾಗಿದ್ದಳು. ಇಬ್ಬರ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. ನಾಲ್ಕನೇ ಮದುವೆಯ ಸಂಭ್ರಮದಲ್ಲಿದ್ದ ಶಯನಾಳನ್ನ ಡ್ರಗ್ಸ್ ಪ್ರಕರಣದಲ್ಲಿ ದೆಹಲಿ ಪೊಲೀಸರು ಬಂಧಿಸಿ ತಿಹಾರ್ ಜೈಲಿಗೆ ಅಟ್ಟಿದ್ದರು. ಇತ್ತ ಶಯನಾ ಜೈಲು ಸೇರುತ್ತಿದ್ದಂತಿ ವಸೀಮ್ ಆಕೆಯ ಸೋದರಿ ರೆಹಾನಾ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಶಯಾನಾ ಜೈಲಿನಲ್ಲಿದ್ದರಿಂದ ಇಬ್ಬರ ಕಳ್ಳಾಟ ಯಾರ ಭಯವಿಲ್ಲದೇ ನಡೆದಿತ್ತು.

ಮಂಚದಾಟ ಬಯಲಾಯ್ತು:
ಜೈಲಿನಲ್ಲಿ ಶಯಾನಾ ಎಂಟು ತಿಂಗಳ ಗರ್ಭಿಣಿಯಾಗಿದ್ದರಿಂದ ಪೆರೋಲ್ ಮೇಲೆ ಹೊರ ಬಂದು ಮನೆ ಸೇರಿದ್ದಳು. ಈ ವೇಳೆ ಪತಿ ವಾಸೀಮ್ ಮಂಚದಾಟದ ವಿಷಯ ತಿಳಿದಿದೆ. ಇದೇ ವಿಷಯವಾಗಿ ಇಬ್ಬರ ನಡುವೆ ಹಲವು ಬಾರಿ ಜಗಳ ಸಹ ನಡೆದಿತ್ತು. ಮಂಗಳವಾರ ಮನೆಗೆ ಬಂದ ವಸೀಮ್ ಪತ್ನಿಯನ್ನ ಕೊಲೆ ಮಾಡಿದ್ದಾನೆ. ಈ ವೇಳೆ ಮಾಲಕಿ ಶಯಾನ ರಕ್ಷಣೆಗೆ ಬಂದ ನೌಕರನ ಮೇಲೆಯೂ ಗುಂಡು ಹಾರಿಸಿದ್ದಾನೆ. ನಂತರ ಠಾಣೆಗೆ ತೆರಳಿ ಕೃತ್ಯಕ್ಕೆ ಬಳಸಿದ ಗನ್ ಪೊಲೀಸರಿಗೆ ನೀಡಿ ಶರಣಾಗಿದ್ದಾನೆ.

The post ನಾಲ್ಕನೇ ಪತಿಯಿಂದ ಕೊಲೆಯಾದ 8 ತಿಂಗಳ ಗರ್ಭಿಣಿ ‘ಡ್ರಗ್ ಕ್ವೀನ್’ ಶಯನಾ appeared first on Public TV.

Source: publictv.in

Source link