ನಾಲ್ಕು ದಿನಗಳಿಂದ ಕೋಮದಲ್ಲಿದ್ದ ಕಡೂರಿನ ಯೋಧ ಜಮ್ಮುವಿನಲ್ಲಿ ನಿಧನ


ಚಿಕ್ಕಮಗಳೂರು: ಕಳೆದ ನಾಲ್ಕು ದಿನಗಳಿಂದ ಕೋಮ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಡೂರು ಮೂಲದ ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಇಂದು ಮೃತರಾಗಿದ್ದಾರೆ.

ಬಿ.ಕೆ ಶೇಷಪ್ಪ (45) ಮೃತಪಟ್ಟ ಯೋಧರಾಗಿದ್ದು, ಜಮ್ಮುವಿನಲ್ಲಿ ಬಿಎಸ್​ಎಫ್​​ನ ಮೆಕ್ಯಾನಿಕಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಾಲ್ಕು ದಿನದ ಹಿಂದೆ ವಾಹನ ರಿಪೇರಿ ಮಾಡುವಾಗ ಜಾಕ್​ ಸ್ಲೀಪ್ ಆಗಿ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಪರಿಣಾಮ ನಾಲ್ಕು ದಿನದಿಂದ ಶೇಷಪ್ಪ ಅವರು ಕೋಮಾದಲ್ಲಿದ್ದರು. ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶೇಷಪ್ಪ ಅವರು ಚಿಕ್ಕಮಗಳೂರಿನ ಕಡೂರು ತಾಲೂಕಿನ ಬಿಳವಾಲ ಗ್ರಾಮದವರಾಗಿದ್ದರು.

News First Live Kannada


Leave a Reply

Your email address will not be published.