ಬೆಂಗಳೂರು: ಸಾವಿನಲ್ಲೂ ಸಾರ್ಥಕತೆ ಮೆರದಿದ್ದ ಕನ್ನಡದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕಣ್ಣುಗಳು ನಾಲ್ಕು ಅಂಧರಿಗೆ ಅಳವಡಿಸಲಾಗಿತ್ತು ಎಂದು ಮೊನ್ನೆ ಮಾಹಿತಿ ಲಭ್ಯವಾಗಿತ್ತು. ಆದರೆ ಪುನೀತ್ ಇನ್ನು ಹಲವಾರು ವಿಕಲ ಚೇತನರ ಬಾಳಿಗೆ ಬೆಳಕಾಗುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅದು ಹೇಗೆ ಗೊತ್ತಾ?
ಹೌದು, ಪುನೀತ್ ನಿಧನದ ನಂತರ ನೇತ್ರದಾನ ಮಾಡಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿನ ನವೀನ ಆವಿಷ್ಕಾರಗಳನ್ನು ಬಳಸಿಕೊಂಡು ಅಪ್ಪು ನೇತ್ರಗಳನ್ನು ನಾಲ್ವರಿಗೆ ಜೋಡಿಸಲಾಗಿದೆ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ. ಭುಜಂಗ್ ಶೆಟ್ಟಿ ಮಾಹಿತಿ ನೀಡಿದ್ದರು. ಆದರೆ ಪುನೀತ್ ಕಣ್ಣುಗಳ ಭಾಗಗಳನ್ನು ಇನ್ನು ಹಲವರಿಗೆ ಜೋಡಿಸಲಾಗುವುದೆಂದು ಮುಖ್ಯಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ:ಶಿವಣ್ಣ-ಅಪ್ಪುಗಾಗಿ ಕಥೆ ಮಾಡಿದ್ದ ಭಟ್ರು; ಅಣ್ಣ-ತಮ್ಮ ನಟಿಸೋ ಕನಸು ಕನಸಾಗಿ ಉಳಿದೋಯ್ತು
ಪುನೀತ್ ಕಣ್ಣಿನ ಸುತ್ತ ಇರುವ ರಿಮ್ (ಕಣ್ಣಿನ ಪದರಿನ ಒಂದು ಭಾಗ) ಎಂಬ ಅಂಶವನ್ನು ತೆಗೆದಿಟ್ಟುಕೊಳ್ಳಲಾಗಿದ್ದು ಅದನ್ನು ಸೇಫ್ ಆಗಿ ಲ್ಯಾಬ್‌ನಲ್ಲಿ ಶೇಖರಿಸಿಡಲಾಗಿದೆಯಂತೆ. ರಿಮ್‌ಗಳಲ್ಲಿ ಇರೋ ಸ್ಟೆಮ್ ಸೆಲ್ಸ್‌ಗಳನ್ನು ಲ್ಯಾಬ್‌ನಲ್ಲಿ ಬೆಳೆಸಲಾಗುತ್ತದೆ. ಆ ಸ್ಟೆಮ್ ಸೆಲ್‌ಗಳು ಕೆಲ ದಿನಗಳಲ್ಲಿ ಮಲ್ಟಿಪ್ಲೈ ಆಗಲಿವೆ. ಆ ಬಳಿಕ ಆ್ಯಸಿಡ್, ಸುಣ್ಣ, ಪಟಾಕಿಯಿಂದ ಹಾನಿಗೊಳಗಾದ ರೋಗಿಗಳಿಗೆ ಅಪ್ಪುರವರ ಸ್ಟೆಮ್ ಸೆಲ್ಗಳನ್ನು ಟ್ರಾನ್ಸ್‌ಪ್ಲಾಂಟ್ ಮಾಡುವ ಮೂಲಕ ದೃಷ್ಟಿದೋಷವನ್ನು ನಿವಾರಿಬಹುದು ಎಂದು ಡಾ.ಭುಜಂಗ ಶೆಟ್ಟಿ ತಿಳಿಸಿದ್ದಾರೆ.