ಧಾರವಾಡ: ಕೊರೊನಾ ಎರಡನೇ ಅಲೆಗೆ ಬ್ರೇಕ್​ ಹಾಕಲು ಸರ್ಕಾರ ಲಾಕ್​​ಡೌನ್​ ಜಾರಿ ಮಾಡಿದ್ದು, ಈ ನಡುವೆಯೇ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ನಾಳೆಯಿಂದ ಜೂನ್ 7 ರವರೆಗೆ ಜಿಲ್ಲೆಯಲ್ಲಿ ಕಂಪ್ಲೀಟ್ ಲಾಕ್​​ಡೌನ್​​ ಜಾರಿ ಮಾಡಲಾಗಿದೆ.

ಸಚಿವ ಜಗದೀಶ್ ಶೆಟ್ಟರ್ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದು, ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಹಾಲು, ತರಕಾರಿಗೆ ಖರೀದಿ ಹಾಗೂ ಆರೋಗ್ಯ ಸೇವೆ, ತುರ್ತು ಸೇವೆಗೆ ಅವಕಾಶ ಮಾತ್ರ ಅವಕಾಶ ನೀಡಲಾಗಿದೆ. ಗುರುವಾರ ಮತ್ತು ಶುಕ್ರವಾರ ಬೆಳಿಗ್ಗೆ 6 ರಿಂದ 10ರವೆರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ. ಡಿಸಿ, ಪೊಲೀಸ್ ಕಮಿಷನರ್ ಜೊತೆ ಚರ್ಚೆಯ ಬಳಿಕ ಉಸ್ತುವಾರಿ ಸಚಿವರ ನಿರ್ಧಾರ ಕೈಗೊಂಡಿದ್ದಾರೆ.

The post ನಾಳೆಯಿಂದ ಜೂನ್​​ 7ವರೆಗೂ ಧಾರವಾಡ ಜಿಲ್ಲೆಯಾದ್ಯಂತ ಕಂಪ್ಲೀಟ್​​ ಲಾಕ್​​ಡೌನ್ appeared first on News First Kannada.

Source: newsfirstlive.com

Source link