ವಿಜಯನಗರ: ರಾಜ್ಯಾದ್ಯಂತ ನಾಳೆಯಿಂದ ಮೂರನೇ ಹಂತದ ಲಾಕ್​ಡೌನ್ ಸಡಿಲಿಕೆ ಜಾರಿಯಾಗಲಿದೆ. ದೇವಸ್ಥಾನ, ಮಠ ಮಂದಿರಗಳನ್ನು ತೆರೆಯಲು ಸರ್ಕಾರ ಗ್ರೀನ್ ​ಸಿಗ್ನಲ್​ ನೀಡಿದೆ. ಈ ಹಿನ್ನೆಲೆ ರಾಜ್ಯದ ಬಹುತೇಕ ದೇಗುಲಗಳು ನಾಳೆಯಿಂದ ಭಕ್ತರಿಗೆ ಪ್ರವೇಶ ನೀಡಲು ಸಿದ್ಧತೆ ಆರಂಭಿಸಿವೆ.

ನಾಳೆಯಿಂದ ವಿಶ್ವವಿಖ್ಯಾತ ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯದಲ್ಲಿ ಭಕ್ತರಿಗೆ ಪ್ರವೇಶ ನೀಡಲಿರುವ ಹಿನ್ನೆಲೆ, ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ.  ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಗಿದೆ.

ಹಂಪಿ ಸೇರಿದಂತೆ, ಹೊಸಪೇಟೆಯ ನಾನಾ ಕಡೆ ಸಿಬ್ಬಂದಿ ಮತ್ತು ಅರ್ಚಕರು ದೇಗುಲಗಳಲ್ಲಿ ನೀರು ಹಾಕಿ, ಕಸ ಗುಡಿಸಿ ಸ್ವಚ್ಚತಾ ಕಾರ್ಯ ಮಾಡುತ್ತಿದ್ದಾರೆ. ಭಕ್ತರು ಕೊರೊನಾ ನಿಯಮ ಪಾಲನೆ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

The post ನಾಳೆಯಿಂದ ದೇಗುಲಗಳು ಓಪನ್: ವಿಶ್ವವಿಖ್ಯಾತ ಹಂಪಿಯಲ್ಲಿ ಸ್ವಚ್ಛತಾ ಕಾರ್ಯ appeared first on News First Kannada.

Source: newsfirstlive.com

Source link