ಚಾಮರಾಜನಗರ: ರಾಜ್ಯದಲ್ಲಿ ಲಾಕ್​ಡೌನ್ ಸಡಿಲಿಕೆಯಾದ ಹಿನ್ನೆಲೆ ಜಿಲ್ಲೆಯ ಹನೂರಿನ ಇತಿಹಾಸಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರ ಪ್ರವೇಶಕ್ಕೆ ನಾಳೆಯಿಂದ ಅವಕಾಶ ನೀಡಲಾಗ್ತಿದೆ. ಬೆಳಗ್ಗೆ 6 ರಿಂದ ಸಂಜೆ 6 ತನಕ ಮಾತ್ರ ದರ್ಶನಕ್ಕೆ ಅವಕಾಶ ಇರಲಿದೆ.

ಭಕ್ತರು ದರ್ಶನ ಮಾತ್ರ ಪಡೆಯಬಹುದಾಗಿದ್ದು.. ದಾಸೋಹ, ತೀರ್ಥ ಪ್ರಸಾದ ಲಾಡು ಪ್ರಸಾದ ಇರುವುದಿಲ್ಲ. ಯಾವುದೇ ಸೇವೆಗಳು, ಉತ್ಸವಗಳು, ಮುಡಿ ಸೇವೆಯು ಕೂಡ ಇರುವುದಿಲ್ಲ. ಭಕ್ತರು ಮಾಸ್ಕ್ ಧರಿಸಿ ಕೊರೊನಾ ನಿಯಮ ಪಾಲಿಸುವುದು ಕಡ್ಡಾಯ. ಕೋವಿಡ್ ಮಾರ್ಗಸೂಚಿ ಪ್ರಕಾರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಇನ್ನು ಬೆಟ್ಟದ ವಸತಿ ಗೃಹಗಳಲ್ಲಿ ತಂಗಲು ಅವಕಾಶ ಇಲ್ಲ ಅಂತ ಮಲೆಮಹದೇಶ್ವರ ಸ್ವಾಮಿ‌ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ‌ ಮಾಹಿತಿ ನೀಡಿದ್ದಾರೆ.

The post ನಾಳೆಯಿಂದ ಭಕ್ತರಿಗೆ ಮಲೆ ಮಹದೇಶ್ವರನ ದರ್ಶನ.. ಈ ಅವಧಿಯಲ್ಲಿ ಮಾತ್ರ appeared first on News First Kannada.

Source: newsfirstlive.com

Source link