ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ 14 ದಿನಗಳ ಕಾಲ ಕಠಿಣ ಕ್ರಮ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಂದು ಸಿಎಂ ಸಂಪುಟ ಸಭೆ ನಡೆಸಿದ್ರು. ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಮಹಾರಾಷ್ಟ್ರವನ್ನ ಮೀರಿಸಿ ಬೆಂಗಳೂರು ಸುತ್ತಮುತ್ತ ಸೋಂಕು ಜಾಸ್ತಿಯಾಗ್ತಿದೆ. ಈ ಬಗ್ಗೆ ಸಂಪುಟ ಸಹೋದ್ಯೋಗಿಗಳು ಹಾಗೂ ತಜ್ಞರ ಜೊತೆ ಚರ್ಚಿಸಿ ಕೆಲವು ನಿರ್ಧಾರಿಕ್ಕೆ ಬಂದಿದ್ದೇವೆ ಎಂದರು.

  • ಸರ್ಕಾರಿ ಆಸ್ಪತ್ರೆಗಳಲ್ಲಿ 18 ರಿಂದ 45 ವರ್ಷ ವಯಸ್ಸಿನವರಿಗೆ ಲಸಿಕೆ ಉಚಿತವಾಗಿ ನೀಡುತ್ತೇವೆ.
  •  ನಾಳೆಯಿಂದ ಬೆಳಗ್ಗೆ 6ರಿಂದ 10ರವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ.
  • ಇನ್ಮುಂದೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಆಗೋದಿಲ್ಲ. ಕೇಂದ್ರ ಸರ್ಕಾರ 800 ಮೆಟ್ರಿಕ್ ಟನ್​ ಆಕ್ಸಿಜನ್ ಪೂರೈಕೆಗೆ ಒಪ್ಪಿದೆ.
  • ಕನ್ಸ್​ಟ್ರಕ್ಷನ್, ಮೆಡಿಕಲ್, ಕೃಷಿ ವಲಯ ಎಂದಿನಂತೆ ಕಾರ್ಯನಿರ್ವಹಿಸಲು ಅವಕಾಶ.
  •  ಎರಡು ವಾರದಲ್ಲಿ ಕೊರೊನಾ ಕಂಟ್ರೋಲ್​ಗೆ ಬರದಿದ್ರೆ ಕ್ರಮ ಮುಂದುವರೆಸಲಾಗುತ್ತದೆ.
  • ರೈತರು ಬೆಳೆದ ಹಣ್ಣು ಹಂಪಲು ತರಕಾರಿ ಮಾರಾಟಕ್ಕೆ ಅವಕಾಶ.
  • ಕೆಲವೇ ಗಂಟೆಗಳಲ್ಲಿ ಗೈಡ್​​ಲೈನ್ಸ್​ ಹೊರಡಿಸಲಾಗುತ್ತದೆ.
  • ಮುಂದಿನ 6 ತಿಂಗಳು ಎಲ್ಲಾ ಚುನಾವಣೆಗಳನ್ನ ಮುಂದೂಡಿಕೆ ಮಾಡಲು ಚುನಾವಣಾ ಆಯೋಗಕ್ಕೆ ಶಿಫಾರಸು

 

The post ನಾಳೆಯಿಂದ ರಾಜ್ಯದಲ್ಲಿ ಬಿಗಿ ಕ್ರಮ ಘೋಷಿದ ಸಿಎಂ; ಒಂದು ರೀತಿಯಲ್ಲಿ ರೂಪಾಂತರಿ ಲಾಕ್​ಡೌನ್ ಜಾರಿ appeared first on News First Kannada.

Source: News First Kannada
Read More