ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ನಾಳೆಯಿಂದ ಕಂಪ್ಲೀಟ್​ ಲಾಕ್​ಡೌನ್ ಜಾರಿಯಾಗಲಿದೆ. ಈ ಹಿನ್ನೆಲೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ  ಬಿ.ಎಸ್​ ಯಡಿಯೂರಪ್ಪಗೆ ಕರೆ ಮಾಡಿ ರಾಜ್ಯದ ಕೊರೊನಾ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಮೂರು ನಿಮಿಷಗಳ ಕಾಲ ಮೋದಿ ಅವರೊಂದಿಗೆ ಯಡಿಯೂರಪ್ಪ ಸಂಭಾಷಣೆ ನಡೆಸಿದ್ರು. ನಾಳೆಯಿಂದ ಲಾಕ್‌ಡೌನ್ ಜಾರಿಯಾಗುತ್ತಿರುವ ಕಾರಣ ಅದರ ಬಗ್ಗೆಯೂ ಪ್ರಧಾನಿ ಮಾಹಿತಿ ಕಲೆ ಹಾಕಿದರು ಅಂತ ತಿಳಿದುಬಂದಿದೆ.

The post ನಾಳೆಯಿಂದ ಲಾಕ್​ಡೌನ್: ಸಿಎಂ ಯಡಿಯೂರಪ್ಪಗೆ ಪ್ರಧಾನಿ ಮೋದಿ ಕರೆ appeared first on News First Kannada.

Source: newsfirstlive.com

Source link