ಬೆಂಗಳೂರು: ಮೇ 10 ರಿಂದ ರಾಜ್ಯದ ನಿಗದಿತ ಕೇಂದ್ರಗಳಲ್ಲಿ 18 ರಿಂದ 44 ವಯಸ್ಸಿನವರಿಗೆ ಕೋವಿಡ್-19 ಲಸಿಕೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

ಲಸಿಕೆ ಪಡೆಯುವವರು 18-44 ವರ್ಷ ವಯಸ್ಸಿನವರಾಗಿರಬೇಕು. ಈ ವಯಸ್ಸಿನ ಫಲಾನುಭವಿಗಳು ಆನ್​ಲೈನ್​ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಂಡಿರಬೇಕು. ಹಾಗೂ ನೋಂದಾವಣೆಯ ನಂತರ ತಮ್ಮ ಮೊಬೈಲ್​ನಲ್ಲಿ ಸಮಯ ನಿಗದಿಯ ಎಸ್​ಎಮ್​ಎಸ್​ ಸ್ವೀಕರಿಸಿರಬೇಕು.

ಮೊಬೈಲ್‌ ನಲ್ಲಿ ಸ್ವೀಕರಿಸಿದ  SMS ಪರಿಶೀಲಿಸಿದ ನಂತರವಷ್ಟೇ ಪೊಲೀಸ್  ಸಿಬ್ಬಂದಿ ಲಸಿಕಾ ಕೇಂದ್ರಗಳಿಗೆ ತೆರಳಲು ಅನುಮತಿ ನೀಡಲಿದ್ದಾರೆ.

The post ನಾಳೆಯಿಂದ ವ್ಯಾಕ್ಸಿನೇಷನ್​.. ಲಸಿಕೆ ಪಡೆಯೋ ಮುನ್ನ ಹೀಗೆ ಮಾಡ್ಲೇಬೇಕು appeared first on News First Kannada.

Source: newsfirstlive.com

Source link