ಬೆಂಗಳೂರು: ನಾಳೆಯಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ.. ಜುಲೈ 1 ರಿಂದ ಶಾಲೆಗಳು ಓಪನ್ ಆಗಲಿವೆ.. ಶೈಕ್ಷಣಿಕ ವರ್ಷದ ಆರಂಭದಲ್ಲಿ ಯಾವುದೇ ಬದಲಾವಣೆ ಇಲ್ಲ.. ನಾಳೆಯಿಂದಲೇ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಆರಂಭಿಸಲು ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತರಾದ ಅನ್ಬುಕುಮಾರ್ ಸೂಚಿಸಿದ್ದಾರೆ.

ಜುಲೈ ಒಂದರಿಂದ ಶೈಕ್ಷಣಿಕ ವರ್ಷ ಶಾಲಾ ತರಗತಿ ಆರಂಭವಾಗಲಿವೆ.. ನಾಳೆಯಿಂದ ಮಕ್ಕಳ‌ ಶಾಲಾ ದಾಖಲಾತಿ ಪ್ರಾರಂಭಿಸಿ 31/08/2021 ರ ಒಳಗೆ ಮುಕ್ತಾಯಗೊಳಿಸಬೇಕು.. ಲಾಕ್ ಡೌನ್ ಇರೋ ಜಿಲ್ಲೆಯವರು ಪಾಸ್​ನೊಂದಿಗೆ ಶಾಲೆಗೆ ಬರಬೇಕು. ಈಗಾಗಲೇ ಒಂದು ಶೈಕ್ಷಣಿಕ ವರ್ಷ ತಡವಾಗಿದೆ.. ಶಿಕ್ಷಕರು ಅನ್ಯ ಕಾರಣ ನೀಡುವಂತಿಲ್ಲ. ಕೊವಿಡ್ ಸಮಯದಲ್ಲಿ ಪೌರಕಾರ್ಮಿಕರ ಮಾದರಿಯಲ್ಲಿ ಶಿಕ್ಷಕರು ಕೆಲಸ ಮಾಡಬೇಕು.. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಹೀಗಾಗಿ ಶೈಕ್ಷಣಿಕ ವರ್ಷ ಮೂಂದುಡುವ ಪ್ರಶ್ನೆಯೇ ಇಲ್ಲ. ಕೋವಿಡ್ ಹಿನ್ನೆಲೆ ತರಗತಿಗಳನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದೆ ಇದ್ದರೆ.. ಪರ್ಯಾಯವಾಗಿ ಆನ್​ಲೈನ್, ದೂರದರ್ಶನ, ಅಂತರ್ಜಾಲ ಕಲಿಕೆಯನ್ನು ನೀಡುವಂತೆ ಶಿಕ್ಷಣ ಇಲಾಖೆ ಆಯಕ್ತರು ಸೂಚನೆ ನೀಡಿದ್ದಾರೆ.

The post ನಾಳೆಯಿಂದ ಶೈಕ್ಷಣಿಕ ವರ್ಷ ಪ್ರಾರಂಭ; ಜುಲೈ ಒಂದರಿಂದಲೇ ಶಾಲೆ ಓಪನ್ appeared first on News First Kannada.

Source: newsfirstlive.com

Source link