ನವದೆಹಲಿ: ಕೇಂದ್ರದ ನೂತನ ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟದ ನೇತೃತ್ವ ವಹಿಸಿದ್ದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಈ ಹಿಂದೆ ಮಾನ್ಸೂನ್ ಅಧಿವೇಶನ ನಡೆಯುವಾಗ ಸಂಸತ್​ನ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದರು.

ಇದೀಗ ನಿರ್ಧಾರ ಬದಲಿಸಿರುವ ರಾಕೇಶ್ ಟಿಕಾಯಿತ್ ನಾಳೆಯಿಂದ ದೆಹಲಿಯ ಜಂತರ್ ಮಂತರ್ ಎದುರು ಪ್ರತಿಭಟನೆ ನಡೆಸೋದಾಗಿ ಹೇಳಿದ್ದಾರೆ. ನಾಳೆ 4-5 ಬಸ್​ಗಳಲ್ಲಿ 200 ಜನ ರೈತರು ಸಿಂಘು ಬಾರ್ಡರ್​​ನಿಂದ ತೆರಳಲಿದ್ದಾರೆ. ನಾವೆಲ್ಲರೂ ಸಿಂಘು ಬಾರ್ಡರ್​ನಲ್ಲಿ ಜೊತೆಯಾಗಿ ಜಂತರ್​ಮಂತರ್​ನತ್ತ ತೆರಳಲಿದ್ದೇವೆ.. ನಾವು ಪಾರ್ಲಿಮೆಂಟ್​ನಲ್ಲಿ ಅಧಿವೇಶನ ಮುಗಿಯವವರೆಗೂ ಜಂತರ್​ಮಂತರ್ ಬಳಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ರಾಕೇಶ್ ಟಿಕಾಯತ್ ಹೇಳಿಕೆ ನೀಡಿದ್ದಾರೆ.

The post ನಾಳೆಯಿಂದ 200 ರೈತರು ಜಂತರ್​ಮಂತರ್​ನಲ್ಲಿ ಪ್ರತಿಭಟನೆ ನಡೆಸ್ತೇವೆ- ರಾಕೇಶ್ ಟಿಕಾಯತ್ appeared first on News First Kannada.

Source: newsfirstlive.com

Source link