ನಾಳೆ ಅದ್ದೂರಿ ರಿಲೀಸ್​​ಗೆ ರೆಡಿಯಾದ ‘ಮದಗಜ’ನ ಸ್ಪೇಷಾಲಿಟಿ ಏನು?


ಭರಾಟೆ ಸಿನಿಮಾದ ನಂತರ ಬರೋಬ್ಬರಿ ಎರಡು ವರ್ಷ ಪ್ರೇಕ್ಷಕರಿಗೆ ಕಂಡಿರಲಿಲ್ಲ ರೋರಿಂಗ್ ಸ್ಟಾರ್ ಶ್ರೀಮುರಳಿ.. ಈಗ ರೋರಿಂಗ್ ಸ್ಟಾರ್ ಮದಗಜ ಚಿತ್ರದ ಮೂಲಕ ನಿರೀಕ್ಷೆಯ ಅಂಬಾರಿಯನ್ನ ಹೊತ್ತು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.. ಹಾಗಾದ್ರೆ ಮದಗಜ ಚಿತ್ರದ ವಿಶೇಷವೇನು? ಯಾಕೆ ಸಿನಿಮಾ ನೋಡಬೇಕು..?

ಖಡಕ್ ಆ್ಯಕ್ಷನ್, ರಗಡ್ ಲುಕ್ , ಒಂದೊಳ್ಳೆ ಲವ್ ಸ್ಟೋರಿ , ಮನ ಮುಟ್ಟೋ ಸಾಂಗ್ಸ್ , ಒಂದೊಳ್ಳೆ ಹಾರ್ಟ್ ಟಚ್ಚಿಂಗ್ ದಿ ಎಂಡಿಂಗ್ ಇವೆಲ್ಲ ಸೇರಿದ್ರಾಗೋದು ಮದಗಜ.. ಅಂದು ಕೊಂಡಂಗೆ ಸಿದ್ಧವಾಗಿ ಅದ್ದೂರಿಯಾಗಿಯೇ ಬರುತ್ತಿದೆ ಮದಗಜ ಸಿನಿಮಾ.. ಇನೇನು ಕೆಲವೇ ಗಂಟೆಗಳಲ್ಲಿ ಮದಗಜನ ಅಸಲಿ ರೂಪ ಬೆಳ್ಳಿ ತೆರೆಯ ಮೇಲೆ ಚಿತ್ತಾರವಾಗಲಿದೆ.

ಮದಗಜ ಸಿನಿಮಾ ರಿಲೀಸ್ ವಿಚಾರದಲ್ಲಿ ಹೊಸ ದಾಖಲೆಯನ್ನ ಮಾಡ್ತಿದೆ.. ಕೊರೊನಾ ಎರಡನೇ ಲಾಕ್​ ಡೌನ್ ನಂತರ ದಾಖಲೆಯ ಪ್ರಮಾಣದಲ್ಲಿ ರಿಲೀಸ್ ಆಗ್ತಿರುವ ಕನ್ನಡ ಸಿನಿಮಾ ಅನ್ನೊ ಹೆಗ್ಗಳಿಕೆಗೆ ಮದಗಜ ಚಿತ್ರ ಪಾತ್ರವಾಗುತ್ತಿದೆ.. ಇನೇನು ಕೆಲವೇ ಗಂಟೆಗಳಲ್ಲಿ ಪ್ರೇಕ್ಷಕರ ಮುಂದೆ ಬಂದು ನಿಲ್ಲಲಿರುವ ಮದಗಜ ರಿಲೀಸ್ ವಿಚಾರದಲ್ಲಿ ದಾಖಲೆ ಮಾಡ್ತಿದೆ.. ಮದಗಜ ಸಿನಿಮಾ 589 ಸಿಂಗಲ್ ಸ್ಕ್ರೀನ್​​ ಥಿಯೇಟರ್​ಗಳು ಹಾಗೂ ಮಲ್ಟಿಫೆಕ್ಸ್ ಸ್ಕ್ರೀನ್ ಸೇರಿಸಿ ಒಟ್ಟು 900 ಸ್ಕ್ರೀನ್ಸ್ ಗಳಲ್ಲಿ ಮದಗಜ ತೆರೆಕಾಣಲಿದೆ..

ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಅಭಿಮಾನಿಗಳು ಕಾತುರತೆಯಿಂದ ಕಾದಿರುವ ಸಿನಿಮಾ ಮದಗಜ.. ಅಯೋಗ್ಯ ಸಿನಿಮಾದ ನಂತರ ಮಹೇಶ್ ಕುಮಾರ್ ಒಂದು ಬಿಗ್ ಬಜೇಟ್ ಮಾಸ್ ಆ್ಯಕ್ಷನ್ ಎಂಟರ್​​ಟೈನ್ಮೆಂಟ್​ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.. ಸ್ಯಾಂಡಲ್​ವುಡ್​​ನಲ್ಲಿ ಸಿನಿಮಾ ಫ್ಯಾಷನ್ ಇರೋ ನಿರ್ಮಾಪಕರಲ್ಲೊಬ್ಬರಾಗಿರುವ ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರವನ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಒಂದು ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಸೃಷ್ಟಿಸಿ ಬನ್ನಿ ಬನ್ನಿ ಎಂದು ಚಿತ್ರಮಂದಿರಕ್ಕೆ ಸ್ವಾಗತಿಸಲು ಏನೇನ್ ಬೇಕೋ ಎಲ್ಲಾ ರೀತಿಯ ಕೌತುಕ ಕಂಟೆಂಟ್ ಮದಗಜನಿಂದ ರೀವಿಲ್ ಆಗಿದೆ.. ಭಾರಿ ನಿರೀಕ್ಷೆಯ ಬಾರವನ್ನ ಹೊತ್ತಿರುವ ಮದಗಜ ಸಿನಿಮಾ ಡಿಸೆಂಬರ್ 3ನೇ ತಾರೀಖ್ ಅಂದರೆ ನಾಳೆ ಶುಕ್ರವಾರ  ನಿಮ್ಮಮುಂದೆ ಬರುತ್ತಿದೆ ಸ್ವಾಗತಿಸಿ.

 

News First Live Kannada


Leave a Reply

Your email address will not be published. Required fields are marked *