ಮೈಸೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಎರಡೆರಡು ಸುದ್ದಿಗೋಷ್ಠಿಗಳನ್ನ ನಡೆಸಿ ನಟ ದರ್ಶನ್ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಸಂದೇಶ್ ನಾಹರಾಜ್ ಒಡೆತನ ಹೋಟೆಲ್ ಸಂದೇಶ್​ ಪ್ರಿನ್ಸ್​ಗೆ ಭೇಟಿ ನೀಡಿ ಸಂದೇಶ್ ನಾಗರಾಜ್ ಹಾಗೂ ಪುತ್ರನ ಜೊತೆ ಮಾತುಕತೆ ನಡೆಸಿದರು. ಈ ವೇಳೆ ದರ್ಶನ್​ಗೆ ಮೈಸೂರಿನ ಸ್ನೇಹಿತರು ಸಾಥ್ ನೀಡಿದ್ದಾರೆ. ಮಾಜಿ ಉಪಮೇಯರ್ ಶ್ರೀಧರ್ ಸಹ ಈ ವೇಳೆ ಉಪಸ್ಥಿತರಿದ್ದರು ಎನ್ನಲಾಗಿದೆ.

ಇನ್ನು ಇಂದು ದರ್ಶನ್ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗಿತ್ತು.. ಸದ್ಯ ಸುದ್ದಿಗೋಷ್ಠಿಯನ್ನ ನಾಳೆಗೆ ಮುಂದೂಡಿದ್ದಾರೆ ಎಂದು ಸಂದೇಶ್ ನಾಗರಾಜ್ ಮಾಹಿತಿ ನೀಡಿದ್ದಾರೆ. ನಾಳೆ ಬೆಳಿಗ್ಗೆ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದು ಬಳಿಕ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದಿದ್ದಾರೆ. ಇನ್ನು ಹೋಟೆಲ್​ನಿಂದ ಹೊರಟ ದರ್ಶನ್ ನಾಳೆ ಮಾತಾಡುತ್ತೇನೆ ಎಂದಿದ್ದಾರೆ.

The post ನಾಳೆ ಚಾಮುಂಡಿ ಬೆಟ್ಟಕ್ಕೆ ದರ್ಶನ್ ಭೇಟಿ.. ನಂತರ ಮಹತ್ವದ ಸುದ್ದಿಗೋಷ್ಠಿ appeared first on News First Kannada.

Source: newsfirstlive.com

Source link