ನಾಳೆ ಟಿ20 ವಿಶ್ವಕಪ್​​ ಫೈನಲ್​​​; ಗೆಲ್ಲೋಕೆ ಟಾಸ್​​ ಅಲ್ಲ, ಉತ್ತಮ ಬ್ಯಾಟಿಂಗ್​​ ಮುಖ್ಯ ಎಂದ ಫಿಂಚ್


ಬಹು ನಿರೀಕ್ಷಿತ ಟಿ20 ವಿಶ್ವಕಪ್​ಗೆ ನಾಳೆ ದುಬೈ ಇಂಟರ್​​​ನ್ಯಾಷನಲ್​ ಕ್ರೀಡಾಂಗಣದಲ್ಲಿ ತೆರೆ ಬೀಳಲಿದೆ. ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿರುವ ಆಸ್ಟ್ರೇಲಿಯಾ – ನ್ಯೂಜಿಲೆಂಡ್‌ ಚೊಚ್ಚಲ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

ಫೈನಲ್​ ಪಂದ್ಯಕ್ಕೂ ಮುನ್ನ ಮಾತಾಡಿರುವ ಆಸಿಸ್​ ನಾಯಕ ಆ್ಯರೋನ್​ ಫಿಂಚ್​, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಟಾಸ್​ ಕುರಿತು ಮಾತನಾಡಿದ ಫಿಂಚ್​, ನನಗೆ ಟಾಸ್​​ ಮುಖ್ಯ ಅಲ್ಲ. ಫೈನಲ್​ ಪಂದ್ಯದಲ್ಲಿ ಅದರ ಕಡೆ ಗಮನ ನೀಡಬಾರದು. ಇದು ನಮಗೆ ಮುಳುವಾಗುವ ಸಾಧ್ಯತೆ ಇದೆ. ಪಂದ್ಯವನ್ನ ಜಯಿಸಲು ಟಾಸ್​​​ ಎಂಬುದನ್ನೇ ನೆಚ್ಚಿಕೊಳ್ಳಬಾರದು ಎಂದು ಹೇಳಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಯಾವುದೇ ತಂಡವಾಗಲಿ, ಚೇಸಿಂಗ್​ಗೆ ಹೆಚ್ಚು ಒಲವು ತೋರುತ್ತೆ. ಆದರೆ ಚೇಸಿಂಗ್​ ಎಂಬುದು ಅಪಾಯದ ಮುನ್ಸೂಚನೆ. ಏಕೆಂದರೆ ಪ್ರತಿಸ್ಪರ್ಧಿ ತಂಡ ಬೃಹತ್​ ಮೊತ್ತ ಕಲೆ ಹಾಕಿದ್ದೇ ಆದರೆ ಪರಿಸ್ಥಿತಿ ಹತೋಟಿಗೆ ಬರುವುದಿಲ್ಲ. ಹಾಗಾಗಿ ಮೊದಲು ಬ್ಯಾಟ್​ ಮಾಡುವುದು ಅಷ್ಟೆ ಮುಖ್ಯ. ಫೈನಲ್‌ನಲ್ಲಿ ಟಾಸ್‌ ಏನು ಬೇಕಾದರೂ ಆಗಬಹುದು. ಎಲ್ಲದಕ್ಕೂ ಸಿದ್ಧವಾಗಬೇಕು ಎಂದು ಹೇಳಿದ್ದಾರೆ.

News First Live Kannada


Leave a Reply

Your email address will not be published. Required fields are marked *