ನಾಳೆ ತೆರೆ ಕಾಣಲಿದೆ ‘ಲವ್​ ಮಾಕ್ಟೇಲ್​-2’..ಗೆಲುವಿನ ನೀರಿಕ್ಷೆಯಲ್ಲಿ ಕೃಷ್ಣ-ಮಿಲನಾ


ಲವ್ ಮಾಕ್ಟೇಲ್ ಪಾರ್ಟ್ 2 ನೋಡೋ ಟೈಂ ಹತ್ರಾ ಬಂದೆ ಬಿಡ್ತು. ಶುಕ್ರವಾರ ಬೆಳಗ್ಗೆಯಿಂದಲೇ ಥಿಯೇಟರ್​​ನಲ್ಲಿ ಡಾರ್ಲಿಂಗ್ ಕೃಷ್ಣರ ಮಾಕ್ಟೇಲ್​ ಕಹಾನಿ ಪ್ರದರ್ಶನ ಆಗಲಿದೆ. ಟಿಕೆಟ್ ಬುಕ್ ಮಾಡಿದವರು ಹೋಗೋಕೆ ರೆಡಿಯಾಗಿ, ಟಿಕೆಟ್ ಬುಕ್ ಮಾಡದವರು ಈಗಲೇ ಟಿಕೆಟ್ ಕಾಯ್ದಿರಿಸಿ.

ಲವ್ ಮಾಕ್ಟೇಲ್ ಹಿಟ್ ಆದಾಗಲೇ ಪಾರ್ಟ್ 2 ಬರುತ್ತಾ ಎಂದು ಹೇಳಿದ್ದರು. ಹೇಳಿದಂತೆ ಸಿನಿಮಾ ರೆಡಿಯಾಗಿ ಬಿಡುಗಡೆಯಾಗುತ್ತಿದೆ. ಇದೇ ಶುಕ್ರವಾರ ಮಾಕ್ಟೇಲ್ 2 ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಮೊದಲ ಭಾಗದಲ್ಲಿ ಮೋಡಿ ಮಾಡಿದ್ದ ಕೃಷ್ಣ ಮತ್ತು ಮಿಲನ ನಾಗರಾಜ್ ಜೋಡಿ ಈ ಬಾರಿಯೂ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆಯಲ್ಲಿದ್ದಾರೆ.

ಮಾಕ್ಟೇಲ್ ಒಂದನೇ ಭಾಗದಲ್ಲಿ ನಿಧಿಮಾ ಪಾತ್ರವನ್ನು ಅಂತ್ಯಗೊಳಿಸಿದ್ದರು. ಕಥೆ ಅಲ್ಲಿಗೆ ಮುಗಿದಿತ್ತು ಎಂದುಕೊಂಡಿದ್ದ ಫ್ಯಾನ್ಸ್​ಗೆ ನಿರ್ದೇಶಕ ಕೃಷ್ಣ ಪಾರ್ಟ್ 2 ಅನೌನ್ಸ್ ಮಾಡಿ ಥ್ರಿಲ್ ಹೆಚ್ಚಿಸಿದ್ದರು. ಆ ಥ್ರಿಲ್​ಗೆ ತಕ್ಕಂತೆ ಎರಡನೇ ಭಾಗ ಸ್ಕ್ರಿಪ್ಟ್​ ಮಾಡಿದ್ದು, ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ನಿರಾಸೆ ಮಾಡಲ್ಲ ಎಂಬ ನಂಬಿಕೆಯಲ್ಲಿದೆ ಚಿತ್ರತಂಡ.

ಇನ್ನು ಡಾರ್ಲಿಂಗ್ ಕೃಷ್ಣ ಜೊತೆ ಅಮೃತಾ ಅಯ್ಯಂಗರ್, ರಚನಾ, ಖುಷಿ, ಸುಷ್ಮಿತಾ ಗೌಡ, ರಚೇಲ್ ಡೇವಿಡ್ ಕಾಣಿಸಿಕೊಂಡಿದ್ದಾರೆ. ನಕುಲ್ ಅಭಯಂಕರ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಸಾಂಗ್ಸ್ ಹಿಟ್ ಆಗಿವೆ. ಒಟ್ನಲ್ಲಿ ಇಷ್ಟು ದಿನ ಸ್ಯಾಂಡಲ್​ವುಡ್​ ಮಂದಿಗೆ ಲವ್ ಮಾಕ್ಟೇಲ್ ಜ್ವರ ಅಂಟಿಕೊಂಡಿತ್ತು. ಅಂತಿಮವಾಗಿ ಥಿಯೇಟರ್​ಗೆ ಸಿನಿಮಾ ಬರ್ತಿದ್ದು, ಪಾಸ್ ಅಥವಾ ಫೇಲ್ ಎಂಬ ಭವಿಷ್ಯ ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ.

The post ನಾಳೆ ತೆರೆ ಕಾಣಲಿದೆ ‘ಲವ್​ ಮಾಕ್ಟೇಲ್​-2’..ಗೆಲುವಿನ ನೀರಿಕ್ಷೆಯಲ್ಲಿ ಕೃಷ್ಣ-ಮಿಲನಾ appeared first on News First Kannada.

News First Live Kannada


Leave a Reply

Your email address will not be published.