ಬಾಲಿವುಡ್ ತಾರೆಗಳ ಮದುವೆ ಸಂಭ್ರಮ ಜೋರಾಗ್ತಿದೆ. ಇತ್ತೀಚೆಗಷ್ಟೇ ಬಾಲಿವುಡ್ ನಟಿ ಕತ್ರಿನಾ ಕೈಫ್, ನಟಿ ಮೌನಿ ರಾಯ್ ಅವರ ವಿವಾಹ ಮಹೋತ್ಸವ ಜರುಗಿತ್ತು.ಇದೀಗ ನಟ ಹಾಗೂ ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಅವರ ಮದುವೆ ಸಂಭ್ರಮ ಶುರುವಾಗಿದೆ.
ಫರ್ಹಾನ್ ಆಖ್ತರ್ ಹಾಗೂ ಶಿಬಾನಿ ದಾಂಡೇಕರ್ ಅವರ ಮದುವೆ ಶಾಸ್ತ್ರಗಳು ಈಗಾಗಲೇ ಆರಂಭವಾಗಿದೆ. ಈ ಜೋಡಿ ಶನಿವಾರದಂದು ವಿವಾಹ ಆಗಲಿದ್ದಾರೆ. ಇನ್ನು, ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರಿಗೆ ಮಾತ್ರ ಆಹ್ವಾನಿಸಲಾಗಿದೆ. ಮಾಧ್ಯಮದವರಿಗೆ ವಿವಾಹ ಸ್ಥಳಕ್ಕೆ ಹೋಗುವ ಅವಕಾಶವಿರುವುದಿಲ್ಲ. ಫೆಬ್ರವರಿ 21 ರಂದು ಮುಂಬೈನ ಬಾಂದ್ರಾದಲ್ಲಿರುವ ಅಖ್ತರ್ ನಿವಾಸದಲ್ಲಿ ಸಂಜೆ ಸ್ನೇಹಿತರಿಗೆ ಮತ್ತು ಸಹೋದ್ಯೋಗಿಗಳಿಗಾಗಿ ಆರತಕ್ಷತೆ ನಡೆಯಲಿದೆ ಎಂದಿದ್ದಾರೆ.
ಫರ್ಹಾನ್ ಅಖ್ತರ್ಗೆ ಇದು ಎರಡನೇ ಮದುವೆ
ನಟ ಹಾಗೂ ನಿರ್ದೇಶಕ ಫರ್ಹಾನ್ ಅಖ್ತರ್ಗೆ ಇದು ಎರಡನೇ ಮದುವೆ. 48 ವರ್ಷ ವಯಸ್ಸಿನ ಫರ್ಹಾನ್ ಅಖ್ತರ್ 2000ನೇ ಇಸವಿಯಲ್ಲಿ ಅಧುನಾ ಭಬಾನಿ ಎಂಬುವರನ್ನು ಮದುವೆಯಾಗಿದ್ದರು. 2017ರಲ್ಲಿ ಫರ್ಹಾನ್ ಅಖ್ತರ್ ಮತ್ತು ಅಧುನಾ ಭಬಾನಿ ವಿಚ್ಛೇದನ ಪಡೆದರು. ಅಧುನಾ ಭಬಾನಿ ಅವರಿಂದ ದೂರಾದ ಬಳಿಕ 2018ರಲ್ಲಿ ಶಿಬಾನಿ ದಾಂಡೇಕರ್ ಅವರನ್ನು ಫರ್ಹಾನ್ ಅಖ್ತರ್ ಪ್ರೀತಿಸಲು ಆರಂಭಿಸಿದರು. ಇದೀಗ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಹಾಕಿಸಿಕೊಳ್ಳಲು ಫರ್ಹಾನ್ ಅಖ್ತರ್ ಹಾಗೂ ಶಿಬಾನಿ ದಾಂಡೇಕರ್ ಮುಂದಾಗಿದ್ದಾರೆ.