ಬೆಂಗಳೂರು: ಮೈಸೂರು ಪಾಲಿಕೆಯ ಮೇಯರ್​ ಚುನಾವಣೆಗೆ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ನಾಳೆ ಮೇಯರ್‌ ಚುನಾವಣೆ ನಡೆಯಬೇಕಿತ್ತು. ಈ ಮಧ್ಯೆ ಹೈಕೋರ್ಟ್ ಚುನಾವಣೆಗೆ ತಡೆ ನೀಡಿ ಆದೇಶ ಹೊರಡಿಸಿದೆ.

ಮೈಸೂರು ವಾರ್ಡ್ ನಂ 15 ಕಾಂಗ್ರೇಸ್ ಅಭ್ಯರ್ಥಿ ಪ್ರದೀಪ್ ಈ ವಿಚಾರವಾಗಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.. ವಿಚಾರಣೆ ನಡೆಸಿದ ಕೋರ್ಟ್.. ಕೊರೊನಾ ನಡುವೆ ಚುನಾವಣೆ ಸರಿಯಾಗಿ ನಡೆಯಲ್ಲ.. ಸದ್ಯ ಲಾಕ್ ಡೌನ್ ಜಾರಿಯಲ್ಲಿದೆ. ಅಲ್ಲದೆ ಡಿಸಾಸ್ಟರ್ ಮ್ಯಾನೆಜ್‌ಮೆಂಟ್‌ ಆಕ್ಟ್ ಉಲ್ಲಂಘನೆ ಆಗುತ್ತೆ. 50 ಕ್ಕೂ ಹೆಚ್ಚು ಮಂದಿ ಒಂದೆಡೆ ಸೇರುವಂತಿಲ್ಲ ಎಂದು ಕಾರಣ ನೀಡಿ ಚುನಾವಣೆಗೆ ಕೋರ್ಟ್ ತಡೆ ನೀಡಿದೆ.

ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದುಗೊಂಡ ಹಿನ್ನೆಲೆ ಮೇಯರ್​​ ಸ್ಥಾನದಿಂದ ಕೆಳಗಿಳಿದಿದ್ದರು. ಈ ಹಿನ್ನೆಲೆ ಮರುಚುನಾವಣೆಗೆ ನಾಳೆ ದಿನಾಂಕ ನಿಗದಿಯಾಗಿತ್ತು. ಇನ್ನು ಕೆಲವು ದಿನಗಳ ಹಿಂದಷ್ಟೇ ಮೈಸೂರು ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದು ಪ್ರಕರಣದ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯ ಅರ್ಜಿ ವಿಚಾರಣೆಯನ್ನ ಸುಪ್ರೀಂ ಕೋರ್ಟ್​ ನಡೆಸಿತ್ತು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ಎಂ ಆರ್ ಷಾ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ಮೈಸೂರು ಮೇಯರ್ ಸ್ಥಾನಕ್ಕೆ ಜೂನ್ 11 ರಂದು ಚುನಾವಣೆ ನಿಗದಿಯಾಗಿದೆ. ನನ್ನ ಹೆಸರಲ್ಲಿ ಆಸ್ತಿ ಇರದ ಕಾರಣ ಪತಿ ಮಾದೇಗೌಡ ಆಸ್ತಿಯನ್ನ ನನ್ನ ಆಸ್ತಿಯೆಂದು ಘೋಷಿಸಿದ್ದೆ. ಈ ಹಿನ್ನಲೆ ಪ್ರಮಾದವಾಗಿತ್ತು ಎಂದು ಮೇಲ್ಮನವಿ ಸಲ್ಲಿಸೋದಾಗಿ ರುಕ್ಮಿಣಿ ಹೇಳಿದ್ದರು.

 

 

The post ನಾಳೆ ನಡೆಯಬೇಕಿದ್ದ ಮೈಸೂರು ಮೇಯರ್ ಚುನಾವಣೆಗೆ ಹೈಕೋರ್ಟ್ ತಡೆ appeared first on News First Kannada.

Source: newsfirstlive.com

Source link