ನಾಳೆ ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ: ರಾತ್ರಿ 9.30ರಿಂದ ಸಂಚಾರ ಸ್ಥಗಿತ | Variation in Namma Metro Train Traffic tomorrow: Traffic breakdown from 9.30 pm


ನಾಳೆ ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ: ರಾತ್ರಿ 9.30ರಿಂದ ಸಂಚಾರ ಸ್ಥಗಿತ

ಪ್ರಾತಿನಿಧಿಕ ಚಿತ್ರ

ನೇರಳೆ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿ ಹಿನ್ನೆಲೆ ನಾಳೆ ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬಿಎಂಆರ್ಸಿಎಲ್​ನಿಂದ ಮಾಧ್ಯಮ ಪ್ರಕಟಣೆ ನೀಡಲಾಗಿದೆ.

ಬೆಂಗಳೂರು: ಎಂ.ಜಿ ರಸ್ತೆ ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳ ನಡುವೆ ನೇರಳೆ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿ ಹಿನ್ನಲೆ ರಾತ್ರಿ 9.30 ರಿಂದ ನಮ್ಮ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ ಎಂದು ಬಿಎಂಆರ್ಸಿಎಲ್​ನಿಂದ ಮಾಧ್ಯಮ ಪ್ರಕಟಣೆ ನೀಡಲಾಗಿದೆ. ಎಂ.ಜಿ ರಸ್ತೆ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣದ ನಡುವೆ ಮಾತ್ರ ಮೆಟ್ರೋ ಸೇವೆ ಲಭ್ಯವಿರಲಿದೆ. ನಾಳೆ ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ಕೊನೆಯ ರೈಲು 8.40 ಕ್ಕೆ ಹೊರಡಲಿದೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಕಡೆಗೆ ರಾತ್ರಿ 9.10ಕ್ಕೆ ಕೊನೆಯ ಮೆಟ್ರೋ ಸಂಚಾರವಿರಲಿದೆ. ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯವಿಲ್ಲ. ಭಾನುವಾರದಂದು ಎಂದಿನಂತೆ ಮೆಟ್ರೋ ಸಂಚಾರವಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೇ 23ರಿಂದ ಮೆಟ್ರೋ ಪ್ರಯಾಣಿಕರಿಗೆ ಹೊಸ ಪಾಸ್: ನಾಳೆ ಕೊನೆ ದಿನ

ಕೆಲ ದಿನಗಳ ಹಿಂದೆಯಷ್ಟೇ ಒಂದು ಹಾಗೂ ಮೂರು ದಿನದ ಪಾಸುಗಳನ್ನು ಪರಿಚಯಿಸಿದ್ದ ನಮ್ಮ ಮೆಟ್ರೋ ಇದೀಗ ಐದು ದಿನದ ಪಾಸುಗಳನ್ನು ಪರಿಚಯಿಸಲು ಮುಂದಾಗಿದೆ. ಮೇ 23ರಿಂದ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ 5 ದಿನದ ಹೊಸ ಪಾಸ್ ಲಭ್ಯವಾಗಲಿದೆ. 5 ದಿನದ ಪಾಸ್ಗೆ 550 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. 5 ದಿನದ ಪಾಸ್ ಬಗ್ಗೆ ಬಿಎಂಆರ್ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮರು ಪಾವತಿಸಬಹುದಾದ ಸ್ಮಾರ್ಟ್ ಕಾರ್ಡ್ ಭದ್ರತಾ ಠೇವಣಿ 50 ರೂ ಇರಲಿದೆ ಎಂದು ತಿಳಿಸಿದೆ. ಇನ್ನು ಈ ಸ್ಮಾರ್ಟ್ ಕಾರ್ಡನ್ನು ಯಾವುದೇ ಮೆಟ್ರೋ ನಿಲ್ದಾಣದಲ್ಲಿ ಖರೀದಿಸಬಹುದು.

TV9 Kannada


Leave a Reply

Your email address will not be published. Required fields are marked *