ಬೆಂಗಳೂರು: ಇಂದು ಸಂಜೆಯಿಂದ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳು ಸಂಚಾರ ಮಾಡುತ್ತವೆಯೋ ಇಲ್ಲವೋ ಅನ್ನೋದ್ರ ಬಗ್ಗೆ ಜನರು ಗೊಂದಲದಲ್ಲಿದ್ದಾರೆ. ಇದೀಗ ಕೆಎಸ್​ಆರ್​ಟಿಸಿ ಈ ಗೊಂದಲಗಳಿಗೆ ತೆರೆ ಎಳೆದಿದೆ.

KSRTC ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ನ್ಯೂಸ್​ಫಸ್ಟ್​ ಜೊತೆ ಮಾತನಾಡಿ.. ನಾಳೆ, ನಾಡಿದ್ದು ಪ್ರಯಾಣಿಕರ ದಟ್ಟನೆಗೆ ಅನುಗುಣವಾಗಿ ಬಸ್​ಗಳನ್ನ ಕಾರ್ಯಾಚರಣೆ ಮಾಡಲಾಗುತ್ತದೆ. 500 ರಿಂದ 1000 ಬಸ್​ಗಳನ್ನ ಕಾರ್ಯಾಚರಣೆ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.

ಎಂದಿನಂತೆ ಬೆಳಗ್ಗೆ ಹಾಗೂ ರಾತ್ರಿ ಬಸ್​ಗಳ ಕಾರ್ಯಚರಣೆ ಇರಲಿದೆ. ಸದ್ಯ ದಿನಕ್ಕೆ 2 ಸಾವಿರಕ್ಕೂ ಹೆಚ್ಚು ಬಸ್​ಗಳನ್ನ ಓಡಿಸಲಾಗುತ್ತಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ. ಬಸ್​ಗಳ ಸಂಖ್ಯೆಯನ್ನ ಕಡಿಮೆ ಮಾಡಲಾಗುತ್ತದೆ ಎಂದರು.

The post ನಾಳೆ-ನಾಡಿದ್ದು ಬಸ್​ಗಳ ಓಡಾಟ ಇದ್ಯೋ? ಇಲ್ವೋ? -ಗೊಂದಲಗಳಿಗೆ ತೆರೆ ಎಳೆದ KSRTC appeared first on News First Kannada.

Source: newsfirstlive.com

Source link