ಲವ್ಲೀ ಸ್ಟಾರ್ ಪ್ರೇಮ್ ಅಭಿನಯದ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ ರಿಲೀಸ್ಗೆ ದಿನಗಣನೆ ಶುರುವಾಗಿದೆ. ಪ್ರೇಮಂ ಪೂಜ್ಯಂ ಕ್ಯೂಟ್ ಲವ್ ಸ್ಟೋರಿ ಸಿನಿಮಾ.. ಚಿತ್ರದಲ್ಲಿ ಪ್ರೇಮ್ 25ರ ಯುವಕರು ನಾಚುವಂತ ಪಾತ್ರವನ್ನ ನಿಭಾಯಿಸಿದ್ದಾರೆ.. ಚಿತ್ರದಲ್ಲಿ 12 ಹಾಡುಗಳ ಗೊಂಚಲಷ್ಟೇ ಅಲ್ಲ.. ಪ್ರೇಮ್ ಈ ಸಿನಿಮಾಗಾಗಿ ಸಖತ್ ಎಫರ್ಟ್ ಹಾಕಿದ್ದಾರೆ.. ಅಷ್ಟೇ ಅಲ್ಲ ಪ್ರೇಮ್ ಹಿಂದೆದೂ ಕಾಣಿಸದಷ್ಟು ಭಿನ್ನ ವಿಭಿನ್ನ ಪಾತ್ರಗಳಲ್ಲಿ ಪ್ರೇಮ್ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಕಾಣಿಸಿದ್ದಾರೆ..
ಪ್ರೇಮಂ ಪೂಜ್ಯಂ ಸಿನಿ ಪಡೆ ರಾಜ್ಯದ ಮೂಲೆ ಮೂಲೆಗೂ ವಿಸಿಟ್ ಹಾಕಿ ಚಿತ್ರದ ಪ್ರಮೋಷನ್ ಮಾಡೊದ್ರಲ್ಲಿ ಬ್ಯುಸಿಯಾಗಿದೆ.. ರಾಜ್ಯದ ಬಹುತೇಕ ಕಾಲೇಜ್ಗಳಿಗೆ ವಿಸಿಟ್ ಹಾಕಿ ಬಂದಿರುವಬ ಚಿತ್ರತಂಡ ಸದ್ಯ ಬೆಂಗಳೂರಿನಲ್ಲಿ ಚಿತ್ರದ ಪ್ರಚಾರದ ಬಾವುಟ ಹಾರಿಸಿದ್ದ್ದಾರೆ..
ನಮ್ಮ ಲವ್ಲಿ ಸ್ಟಾರ್ ಪ್ರೇಮ್ ಅವರ 25ನೇ ಸಿನಿಮಾ ಬರ್ತಿದೆ.. ಚಿತ್ರತಂಡದಲ್ಲಿ ಎಲ್ಲರೂ ಡಾಕ್ಟರ್ಸ್ ಸೇರಿಕೊಂಡಿದ್ದಾರೆ. ಅವರಿಗೆ ಕಲೆ ಮೇಲಿರುವ ಪ್ರೀತಿಗೆ ಸಿನಿಮಾ ಮಾಡಿದ್ದಾರೆ. ಆ ಚಿತ್ರವೇ ಪ್ರೇಮಂ ಪೂಜ್ಯಂ. ನಾನು ಈ ಚಿತ್ರಕ್ಕೆ ವಿಶ್ ಮಾಡುತ್ತೇನೆ. ಆಲ್ ದಿ ಬೆಸ್ಟ್ ಪ್ರೇಮ್. ಸಿನಿಮಾ ಸಕ್ಸಸ್ ಆಗಲಿ. ಸಿನಿಮಾ ಬರಲಿ, ಒಳ್ಳೆಯದಾಗಲಿ. ನಿಮ್ಮೆಲ್ಲರಿಗೂ ಆಲ್ ದಿ ಬೆಸ್ಟ್. ಸೂಪರ್.
ದಿವಂಗತ ಪುನೀತ್ ರಾಜ್ಕುಮಾರ್
ಪ್ರೇಮಂ ಪೂಜ್ಯಂ ನೆನಪಿರಲಿ ಪ್ರೇಮ್ ಅವರಿಗರ ನೆನಪಲ್ಲಿ ಉಳಿಯುವಂತ ಸ್ಪೆಷಲ್ ಸಿನಿಮಾ ಅಂದ್ರೆ ತಪ್ಪಲ್ಲ.. ಯಾಕಂದ್ರೆ ಪ್ರೇಮಂ ಪೂಜ್ಯಂ ಪ್ರೇಮ್ ಸಿನಿ ಬದುಕಿನ ಸಿಲ್ವರ್ ಜುಬ್ಲಿ ಸಿನಿಮಾ.. ಅಲ್ಲದೆ ಚಿತ್ರದ ಸಂಗೀತ ಮತ್ತೊಂದು ಹೈಲೇಟ್ಸ್.. ತುಂಬಾ ವರ್ಷಗಳ ನಂತ್ರ ಕನ್ನಡದ ಸಿನಿಮಾದಲ್ಲಿ 12 ಹಾಡುಗಳ ತೋರಣವಿದೆ.. ಅಷ್ಟೇ ಅಲ್ಲ ಪ್ರೇಮ್ ಕೆರಿಯರ್ನಲ್ಲೇ ಈ ಚಿತ್ರದಷ್ಟು ದೊಡ್ಡ ಮಟ್ಟದ ಪ್ರಚಾರ ಇನ್ಯಾವ ಚಿತ್ರಕ್ಕೂ ಮಾಡಿಲ್ಲ.. ಇದರ ಜೊತೆಗೆ ಈ ಚಿತ್ರಕ್ಕಾಗಿ ಪ್ರೇಮ್ ಸಖತ್ ಎಫರ್ಟ್ ಹಾಕಿ ಚಿತ್ರದಲ್ಲಿ ಭಿನ್ನ ವಿಭಿನ್ನ ಪಾತ್ರಗಳಗೆ ಮೇಕಪ್ ಹಚ್ಚಿದ್ದಾರೆ..
ಯೆಸ್.. ಪ್ರೇಮ್ ಸಿನಿ ಬದುಕಿಗೆ ಪ್ರೇಮಂ ಪೂಜ್ಯಂ ಯಾಕೆ ತುಂಭಾ ಸ್ಪೆಷಲ್ ಅಂದ್ರೆ ಚಿತ್ರದಲ್ಲಿ ಪ್ರೇಮ್ ಬರೋಬರಿ ಏಳು ಪಾತ್ರಗಳನ್ನ ನಿಭಾಯಿಸಿದ್ದಾರೆ.. ಬಾಲ್ಯ, ಕಾಲೇಜು ಸ್ಟೂಡೆಂಟ್, ಲವರ್ ಭಾಯ್, ಈಗೆ ಒಂದೇ ಸಿನಿಮಾದಲ್ಲಿ ಬಗೆಬಗೆಯ 7 ಪಾತ್ರಗಳಲ್ಲಿ ಪ್ರೇಮ್ ಬಣ್ಣ ಹಚ್ಚಿದ್ದಾರೆ.. ಇನ್ನು ಒಂದೇ ಸಿನಿಮಾಗೆ ಪ್ರೇಮ್ ಇಷ್ಟು ಎಫರ್ಟ್ ಹಾಕಿರೋದಕ್ಕು ಬಲವಾದ ಕಾರಣವಿದ್ದು, ಅದನ್ನ ಲವ್ಲೀ ಸ್ಟಾರೆ ಹೇಳ್ತಾರೆ ಕೇಳಿ..
ಪ್ರೇಮ್ 25ನೇ ಚಿತ್ರ ಪ್ರೇಮಂ ಪೂಜ್ಯಂ ಚಿತ್ರಕ್ಕೆ‘ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಶ್ ಮಾಡಿದ್ದು, ಚಿತ್ರ ರಿಲೀಸ್ಗೂ ಮೊದಲೇ ಅಪ್ಪು ಬಾರದ ಲೋಕಕ್ಕೆ ಹೋಗಿದ್ದಾರೆ.. ಇದು ಪ್ರೇಮ್ ಅವರನ್ನು ಲೈಫ್ ಲಾಂಗ್ ಕಾಡೊದಂತು ಗ್ಯಾರಂಟಿ..
ಪ್ರೇಮ್ ಹಾಗೂ ಪ್ರೇಮಂ ಪೂಜ್ಯಂ ಚಿತ್ರತಂಡ ಚಿತ್ರಕ್ಕಾಗಿ ಭರ್ಜರಿ ಎಫರ್ಟ್ ಹಾಕಿ ಸಿನಿಮಾ ಮಾಡಿದೆ.. ಜೊತೆಗೆ ಅದ್ದೂರಿಯಾಗಿ ಪ್ರಚಾರ ಮಾಡಿ ಇದೇ ವಾರ ಅಂದ್ರೆ ನ. 12ಕ್ಕೆ ಬೆಳ್ಳಿ ತೆರೆಮೇಲೆ ಪ್ರೇಮಂ ಪೂಜ್ಯಂ ಸಿನಿಮಾವನ್ನು ತರಲು ಚಿತ್ರದ ಸಾರಥಿ ರಾಘವೇಂದ್ರ ತಯಾರಿ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಪ್ರೇಮಂ ಪೂಜ್ಯಂ ಪ್ರೇಕ್ಷಕರ ಅಂಗಳದಲ್ಲಿ ಅರಳೋಕೆ ಕೌಂಟ್ ಡೌನ್ ಶುರುವಾಗಿದೆ..