ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ವಿಜೇತರಾಗಿ ಬಿಗ್‍ಬಾಸ್ ಸೀಸನ್-8 ರಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಸದಸ್ಯರಲ್ಲಿ ದಿವ್ಯಾ ಉರುಡುಗ ಕ್ಯಾಪ್ಟನ್ ಆಗಿದ್ದು, ಮನೆಯ ಪುರುಷರಿಗೆ ಕಿಚನ್ ಏರಿಯಾದ ಜವಾಬ್ದಾರಿ ನಿಭಾಯಿಸುವಂತೆ ತಿಳಿಸಿದ್ದಾರೆ.

ಇಷ್ಟು ದಿನ ದೊಡ್ಮನೆಯಲ್ಲಿ ಅಡುಗೆ ಮಾಡುವ ಕೆಲಸ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ವಾರ ಕ್ಯಾಪ್ಟನ್ ಆಗಿರುವ ದಿವ್ಯಾ ಉರುಡುಗ ವಿಶೇಷವಾಗಿ ಮನೆಯ ಎಲ್ಲಾ ಸದಸ್ಯರಿಗೆ ಅಡುಗೆ ಮಾಡಲು ಪುರುಷ ಸದಸ್ಯರಿಗೆ ಸೂಚಿಸಿದ್ದಾರೆ.

ಅದರಂತೆ ಈ ವಿಚಾರವಾಗಿ ಮಂಜು ಹಾಗೂ ಅರವಿಂದ್ ಕಿಚನ್‍ನಲ್ಲಿ ಚರ್ಚೆ ನಡೆಸಿದ್ದಾರೆ. ಈ ವಾರದಲ್ಲಿ ನೀನೆಷ್ಟು ಅಡುಗೆ ಕಲಿಯುತ್ತಿಯಾ ಹಾಗೂ ನಾನು ಎಷ್ಟು ಕಲಿಯುತ್ತೀನಿ ನೋಡೋಣ. ಅಲ್ಲದೇ ಮುಂದಿನ ವಾರ ಕೂಡ ನಾವೇ ಮಾಡಬೆಕಾಗುತ್ತೇನೋ ನನಗೆ ಅದು ಬೇರೆ ಟೆನ್ಷನ್ ಆಗುತ್ತಿದೆ ಎಂದು ಮಂಜು ಅರವಿಂದ್‍ಗೆ ಹೇಳುತ್ತಾರೆ.

ನಂತರ ನಾವು ಅಡುಗೆಯ ರುಚಿಯನ್ನು ಸ್ವಲ್ಪ ಕಡಿಮೆ ಮಾಡೋಣ ಇಲ್ಲ ಅಂದರೆ ಲಾಕ್ ಆಗಿ ಬಿಡುತ್ತೇವೆ ಎಂದು ಮಂಜು ಅಂದಾಗ, ರುಚಿ ಏನಾದರೂ ಜಾಸ್ತಿಯಾಯಿತು ಎಂದರೆ ಹುಳಿ ಹಿಂಡಿ ಬೀಡೋಣ ಎಂದು ಅರವಿಂದ್ ಹೇಳುತ್ತಾರೆ.

ಎಲ್ಲರೂ ಟೆಸ್ಟಿಂಗ್ ಪೌಡರ್ ಕೇಳುತ್ತಾರೆ ಆದರೆ ನಾವು ಟೆಸ್ಟ್ ಲೇಸ್ ಪೌಡರ್ ಕೇಳೋಣ. ನಾವು ಮಾಡುವುದು ಚೆನ್ನಾಗಿಯೇ ಇರುತ್ತದೆ. ಹಾಗಾಗಿ ಟೆಸ್ಟ್ ಲೇಸ್ ಪೌಡರ್ ಹಾಕುವುದು ಉತ್ತಮ. ನಾಳೆ ಬೆಳಗ್ಗೆ ಆ್ಯಪಲ್ ಪಲ್ಯ ಮಾಡೋಣ ಎಂದು ಮಂಜು ಹೇಳುತ್ತಾರೆ. ಆಗ ದಿವ್ಯಾ ಉರುಡಗ, ಅರವಿಂದ್ ಜೋರಾಗಿ ನಗುತ್ತಾರೆ.

The post ನಾಳೆ ಬೆಳಗ್ಗೆ ಆ್ಯಪಲ್ ಪಲ್ಯ ಮಾಡೋಣ: ಮಂಜು appeared first on Public TV.

Source: publictv.in

Source link