ಬೆಂಗಳೂರು: ನಾಳೆ ರಂಜಾನ್ ಹಬ್ಬವಿರೋ ಹಿನ್ನಲೆ,  ಕೊರೊನಾ ಸಾಂಕ್ರಾಮಿಕ ತಡೆಯುವ ನಿಟ್ಟಿನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡದಂತೆ ನಗರ ಪೊಲೀಸರು ಸೂಚಿಸಿದ್ದಾರೆ.

ಈ ಬಗ್ಗೆ ಮಸೀದಿಯ ಹಜರತ್​ಗಳಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಲಾಕ್​ಡೌನ್ ಹಿನ್ನೆಲೆ ರಂಜಾನ್ ಹಬ್ಬದಂದು ಸಾಮೂಹಿಕ ಪ್ರಾರ್ಥನೆಗೆ ಮಸೀದಿ ಬಳಿ ಬರದಂತೆ ಜನರಿಗೆ ತಿಳಿಸಿ. ಅಲ್ಲದೇ, ಮನೆಯಲ್ಲೇ ಪ್ರಾರ್ಥನೆಯನ್ನ ಮಾಡುವಂತೆ ಅಯಾ ಮಸೀದಿಯ ಹಜರತ್​ಗಳಿಂದ ಜನ್ರಿಗೆ ಮಾಹಿತಿ ನೀಡಬೇಕೆಂದು ಹೇಳಿದ್ದಾರೆ.

ಶಿವಾಜಿನಗರದಲ್ಲಿ ಜನವೋ ಜನ
ನಾಳೆ ಹಬ್ಬವಿರೋ ಕಾರಣ ವಸ್ತುಗಳ ಖರೀದಿಗೆ ಇಂದು ಶಿವಾಜಿನಗರದಲ್ಲಿ ಜನವೋ ಜನ. ರಸೆಲ್ ಮಾರ್ಕೆಟ್‌, ಚಾಂದಿನಿ ಚೌಕ್ , ಹೆಚ್.ಕೆ.ಪಿ ರಸ್ತೆ, ಚಾರ್ ಮೀನಾರ್ ಮಸೀದಿ ರಸ್ತೆಯಲ್ಲಿ ಜನರು ವ್ಯಾಪಾರ ನಡೆಸ್ತಿದ್ದಾರೆ. ಖರೀದಿ ಮಾಡ್ಬೇಕಾದ್ರೆ ಕೆಲವರು ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಧರಿಸದೇ ಅಡ್ಡಾದಿಡ್ಡಿ ಓಡಾಡುತ್ತಿರೋದು ಕಂಡುಬಂದಿದೆ. ಇನ್ನು ಶಿವಾಜಿನಗರ ಪೊಲೀಸರು ತಮ್ಮ ವ್ಯಾಪ್ತಿಗೆ ಬರೋ ಎಲ್ಲಾ ಮಸೀದಿಗಳಿಗೆ, ನಾಳೆ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ ಎಂದು ಸೂಚಿಸಿದ್ದಾರೆ.

The post ನಾಳೆ ರಂಜಾನ್​.. ಸಾಮೂಹಿಕ ಪ್ರರ್ಥನೆ ಮಾಡದಂತೆ ಮಸೀದಿ ಹಜರತ್​ಗಳಿಗೆ ಪೊಲೀಸರ ಸೂಚನೆ appeared first on News First Kannada.

Source: newsfirstlive.com

Source link