ನಾಳೆ ಲೂಸ್​​ ಮಾದ ಬರ್ತ್​​ಡೇ -ಲಂಕೆ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್​​

ನಾಳೆ ಲೂಸ್​​ ಮಾದ ಬರ್ತ್​​ಡೇ -ಲಂಕೆ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್​​

ನಾಳೆ ಜುಲೈ 6ನೇ ತಾರೀಕು ಸ್ಯಾಂಡಲ್​​ವುಡ್​​ ನಟ ಲೂಸ್ ಮಾದ ಯೋಗಿಯವರ ಹುಟ್ಟುಹಬ್ಬ. ಇವರ ಹುಟ್ಟುಹಬ್ಬದ ಉಡುಗೊರೆಯಾಗಿ “ಲಂಕೆ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಚಿತ್ರ ತಂಡ ಆನಂದ್ ಆಡಿಯೋ ಮೂಲಕ ಲಂಕೆ” ಚಿತ್ರದ ಮೋಷನ್ ಪೋಸ್ಟರ್ ರಿಲೀಸ್​​ ಮಾಡುತ್ತಿದೆ.

ಇನ್ನು, ಲಂಕೆ ಚಿತ್ರವೂ ಸಾಹಸ ಪ್ರಧಾನ ಆಧಾರಿತ ಕಥೆ ಹೊಂದಿದೆ. ರಾಮ್ ಪ್ರಸಾದ್ ಎಂ.ಡಿ ಎಂಬುವರು ಚಿತ್ರದ ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಇದರೊಂದಿಗೆ ಗುರುರಾಜ ದೇಸಾಯಿ ಅವರೊಂದಿಗೆ ಸೇರಿ ರಾಮ್​ ಪ್ರಸಾದ್​​ ಸಂಭಾಷಣೆಯೂ ಬರೆದಿದ್ದಾರೆ.
ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಅವರು ಈ ಚಿತ್ರದ ನಿರ್ಮಾಪಕರು. ಲಾಕ್​ಡೌನ್​​ ಮುಗಿದು ಥಿಯೇಟರ್​​​ ಓಪನ್​​ ಆದ ಕೂಡಲೇ ತೆರೆ ಮೇಲೆ ಬರಲು ಸಿನಿಮಾ ಸಜ್ಜಾಗಿದೆ.

ಸಿನಿಮಾದ ಸಂಗೀತ ನಿರ್ದೇಶಕರು ಕಾರ್ತಿಕ್ ಶರ್ಮಾ. ಈ ಚಿತ್ರದಲ್ಲಿ ನಾಲ್ಕು ಹಾಡುಗಳು ಹಾಗೂ ಎರಡು ಬಿಟ್ಸ್​ಗಳಿವೆ. ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಲೂಸ್ ಮಾದ ಯೋಗೇಶ್ ಚಿತ್ರದ ನಾಯಕರಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ ಮುಂತಾದವರು ತಾರಾಬಳಗ ಈ ಚಿತ್ರದಲ್ಲಿದ್ದಾರೆ.

The post ನಾಳೆ ಲೂಸ್​​ ಮಾದ ಬರ್ತ್​​ಡೇ -ಲಂಕೆ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್​​ appeared first on News First Kannada.

Source: newsfirstlive.com

Source link