ನಾಳೆ ವಿಚಾರಣೆಗೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಇಡಿ ಸಮನ್ಸ್; ಇಲ್ಲಿಯವರೆಗೆ 4 ದಿನಗಳಲ್ಲಿ ನಡೆದಿದ್ದು 40ಗಂಟೆಗಳ ವಿಚಾರಣೆ | National Herald case Congress leader Rahul Gandhi Summoned By ED Again Tomorrow


ನಾಳೆ ವಿಚಾರಣೆಗೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಇಡಿ ಸಮನ್ಸ್; ಇಲ್ಲಿಯವರೆಗೆ 4 ದಿನಗಳಲ್ಲಿ ನಡೆದಿದ್ದು 40ಗಂಟೆಗಳ ವಿಚಾರಣೆ

ರಾಹುಲ್ ಗಾಂಧಿ

ಇಂದು ವಿಚಾರಣೆ ಪುನರಾರಂಭಗೊಳ್ಳುವ ಮೊದಲು ಆಸ್ಪತ್ರೆಗೆ ದಾಖಲಾಗಿರುವ ಅವರ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಸಮಯ ಕಳೆಯಲು ಅವರಿಗೆ ಅವಕಾಶ ನೀಡಲಾಯಿತು

ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಜಾರಿ ನಿರ್ದೇಶನಾಲಯ (Enforcement Directorate) ಸೋಮವಾರ ನಾಲ್ಕನೇ ದಿನವೂ ವಿಚಾರಣೆ ನಡೆಸಿದ್ದು, ನಾಳೆಯೂ ಅವರಿಗೆ ಸಮನ್ಸ್ ನೀಡಲಾಗಿದೆ. ವಯನಾಡ್ ಸಂಸದರನ್ನು ಇದುವರೆಗೆ ನಾಲ್ಕು ದಿನಗಳಲ್ಲಿ 40 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಕಳೆದ ವಾರ ಸೋಮವಾರದಿಂದ ಬುಧವಾರದವರೆಗೆ ಸುಮಾರು 30 ಗಂಟೆಗೂ ಹೆಚ್ಚು ಕಾಲ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಲಾಗಿತ್ತು. ಇಂದು ವಿಚಾರಣೆ ಪುನರಾರಂಭಗೊಳ್ಳುವ ಮೊದಲು ಆಸ್ಪತ್ರೆಗೆ ದಾಖಲಾಗಿರುವ ಅವರ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಸಮಯ ಕಳೆಯಲು ಅವರಿಗೆ ಅವಕಾಶ ನೀಡಲಾಯಿತು. ಏತನ್ಮಧ್ಯೆ, ಸೋನಿಯಾ ಗಾಂಧಿ ಅವರು ಇಂದು ಡಿಸ್ಚಾರ್ಜ್ ಆಗಿದ್ದಾರೆ. ಆಕೆಗೂ ಇಡಿ ಸಮನ್ಸ್ ನೀಡಿದೆ. ಆದರೆ ಅನಾರೋಗ್ಯದ ಕಾರಣ ಜೂನ್ 23 ರವರೆಗೆ ಕಾಲಾವಕಾಶ ನೀಡಿದೆ.  ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald case) ಗಾಂಧಿಯವರ ಪಾತ್ರದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಇದು ಯಂಗ್ ಇಂಡಿಯನ್ಸ್ ಎಜೆಎಲ್ (ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್) ಅನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ.ಇದು ಕಾಂಗ್ರೆಸ್ ಮುಖವಾಣಿಯಾದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನಡೆಸುತ್ತಿರುವ ಕಂಪನಿ ಆಗಿದೆ.

ಯಂಗ್ ಇಂಡಿಯನ್ ಎಜೆಎಲ್‌ನ ₹ 800 ಕೋಟಿ ಆಸ್ತಿಯನ್ನು ಪಡೆದುಕೊಂಡಿದೆ. ಆದಾಯ ತೆರಿಗೆ ಇಲಾಖೆಯ ಪ್ರಕಾರ, ಇದನ್ನು ಯಂಗ್ ಇಂಡಿಯನ್‌ನ ಷೇರುದಾರರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಆಸ್ತಿ ಎಂದು ಪರಿಗಣಿಸಬೇಕು, ಇದಕ್ಕಾಗಿ ಅವರು ತೆರಿಗೆ ಪಾವತಿಸಬೇಕು.

ಯಂಗ್ ಇಂಡಿಯನ್ ಲಾಭರಹಿತ ಸಂಸ್ಥೆ, ಆದ್ದರಿಂದ ಷೇರುದಾರರು ಅದರ ಆಸ್ತಿಯಿಂದ ಯಾವುದೇ ಹಣವನ್ನು ಗಳಿಸಲು ಸಾಧ್ಯವಿಲ್ಲ ಎಂದು ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ಕಳೆದ ವಾರ ಕೇಂದ್ರ ದೆಹಲಿಯ ಇಡಿ ಕಚೇರಿಯಲ್ಲಿ ರಾಹುಲ್ ಗಾಂಧಿಯನ್ನು ಪ್ರಶ್ನಿಸುತ್ತಿರುವಾಗ, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಿಜೆಪಿ ಸೇಡಿನ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

TV9 Kannada


Leave a Reply

Your email address will not be published.