ನಾಳೆ ಸಂಜೆಯೇ ಕೇಂದ್ರ ಸಂಪುಟ ಪುನರ್​​ ರಚನೆ; ಯುವ ನಾಯಕರಿಗೆ ಮಣೆ?

ನಾಳೆ ಸಂಜೆಯೇ ಕೇಂದ್ರ ಸಂಪುಟ ಪುನರ್​​ ರಚನೆ; ಯುವ ನಾಯಕರಿಗೆ ಮಣೆ?

ನವದೆಹಲಿ: ನಾಳೆಯೇ ಸಚಿವ ಸಂಪುಟ ಪುನರ್ ರಚನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ವರದಿಗಳು ಪ್ರಕಾರ ಸಂಜೆ 6 ಗಂಟೆಗೆ ಮೋದಿ ಅವರ ಹೊಸ ಟೀಂ ರಚನೆಯಾಗಲಿದೆ. ಕೆಲವು ವರದಿಗಳ ಪ್ರಕಾರ ಯುವ ನಾಯಕರಿಗೆ ಪ್ರಧಾನಿ ಮೋದಿ ಆದ್ಯತೆ ನೀಡುವ ಸಾಧ್ಯತೆ ಇದೆ.

ಆಡಳಿತದಲ್ಲಿ ಹೆಚ್ಚು ಅನುಭವ ಹೊಂದಿರೋರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನ ನೀಡುವುದರ ಜೊತೆಗೆ ಮಹಿಳಾ ಸಂಸದರನ್ನೂ ಪ್ರಮುಖವಾಗಿ ಪರಿಗಣಿಸುವ ಸಾಧ್ಯತೆ ಇದೆ ಅಂತಾ ಹೇಳಲಾಗಿದೆ. ಹಾಗೆಯೇ ಪಿಹೆಚ್​ಡಿ, ಎಂಬಿಎ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವ ಸಂಸದರನ್ನು ಕೂಡ ಮೋದಿ ಅಂಡ್ ಅಮಿತ್ ಶಾ ಟೀಂ ಗಣನೆಗೆ ತೆಗೆದುಕೊಳ್ಳಲಿದೆ ಅಂತಾ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಸಂಸದರಲ್ಲೂ ಸಚಿವ ಸ್ಥಾನದ ನಿರೀಕ್ಷೆ ಹೆಚ್ಚಾಗಿದೆ. ರಾಜ್ಯದಿಂದ ಯಾರಿಗೆಲ್ಲಾ ಕೇಂದ್ರದಲ್ಲಿ ಸ್ಥಾನಮಾನ ಸಿಗಬಹುದು? ಸೆಂಟ್ರಲ್‌ ಕ್ಯಾಬಿನೆಟ್‌ಗೆ ಯಾರೆಲ್ಲಾ ಸೇರ್ಪಡೆಯಾಗ್ತಾರೆ ಅನ್ನೋ ಕುತೂಹಲ ಮೂಡಿದೆ.

ಮೋದಿ ಕ್ಯಾಬಿನೆಟ್​ಗೆ ಸೇರಬಹುದಾದ ಕೆಲವು ನಾಯಕರ ಹೆಸರು ಕೇಳಿಬರ್ತಿದೆ. ಅವರಲ್ಲಿ ಪ್ರಮುಖವಾಗಿ ಬಿ.ವೈ.ರಾಘವೇಂದ್ರ, ಪಿ.ಸಿ.ಗದ್ದೀಗೌಡರ್, ಶಿವಕುಮಾರ್ ಉದಾಸಿ, ಶೋಭಾ ಕರಂದ್ಲಾಜೆ, ಪ್ರತಾಪ್‌ಸಿಂಹ, ಡಾ.ಉಮೇಶ್ ಜಾಧವ್, ಎ.ನಾರಾಯಣಸ್ವಾಮಿ ಹೆಸರು ಕೇಳಿಬಂದಿದೆ.

The post ನಾಳೆ ಸಂಜೆಯೇ ಕೇಂದ್ರ ಸಂಪುಟ ಪುನರ್​​ ರಚನೆ; ಯುವ ನಾಯಕರಿಗೆ ಮಣೆ? appeared first on News First Kannada.

Source: newsfirstlive.com

Source link