ಸ್ಟಾರ್ ಸುವರ್ಣ ವಾಹಿನಿಯ ಪಾಪ್ಯುಲರ್ ಡ್ಯಾನಿಂಗ್ ಶೋ ಡ್ಯಾನ್ಸ್ ಡ್ಯಾನ್ಸ್. ಹಲವು ಸೀಸನ್ಗಳನ್ನ ಯಶಸ್ವಿಯಾಗಿ ಪೂರೈಸಿದ್ದ ಡ್ಯಾನ್ಸ್ ಡ್ಯಾನ್ಸ್ನ ಈ ಸೀಸನ್ ಜನರ ಮೆಚ್ಚುಗೆ ಪಡೆದಿದೆ. ಸೆಲಬ್ರೆಟಿ ಹಾಗೂ ಡ್ಯಾನ್ಸರ್ಸ್ ಜೋಡಿಗಳ ನಡುವೆ ಒಂದು ಡ್ಯಾನ್ಸಿಂಗ್ ವಾರ್ ನಡೆದಿತ್ತು. ವಿಶೇಷ ಅಂದ್ರೆ, ಈ ಶೋ ಲಾಂಚಿಂಗ್ಗೆ ಪುನೀತ್ ರಾಜ್ಕುಮಾರ್ ಬಂದಿದ್ದರು. ಅಪ್ಪು ಕೊನೆಯದಾಗಿ ಭಾಗವಹಿಸಿದ್ದ ರಿಯಾಲಿಟಿ ಶೋ ಅಂದ್ರೆ ಅದು ಡ್ಯಾನ್ಸ್ ಡ್ಯಾನ್ಸ್.
ಕಳೆದ ವಾರ ಸೆಮಿಫಿನಾಲೆ ಎಪಿಸೋಡ್ಗಳು ಜನರ ಮೆಚ್ಚುಗೆ ಪಡೆದಿತ್ತು. ಸೆಮಿಫಿನಾಲೆಯ ನಂತರ ಜನರಲ್ಲಿ ಫಿನಾಲೆಯ ಬಗ್ಗೆ ಕುತೂಹಲ ಏರ್ಪಟ್ಟಿದೆ. ನಾಳೆ ಸಂಜೆ 6ಗಂಟೆಗೆ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋನ ಫಿನಾಲೆ ಪ್ರಸಾರವಾಗ್ಲಿದೆ. ಈ ಶೋನ ಯಾರು ವಿನ್ ಆಗ್ಬುಹುದು ಎಂಬ ಕಾತುರತೆಗೆ ನಾಳೆ ಬ್ರೇಕ್ ಬೀಳಲಿದೆ.
ಬಿಗ್ಬಾಸ್ ಖ್ಯಾತಿಯಾ ಶೈನ್ ಶೆಟ್ಟಿ ಡ್ಯಾನ್ಸ್ ಡ್ಯಾನ್ಸ್ ಶೋನ ಹೋಸ್ಟ್ ಆಗಿ ಕಾರ್ಯನಿರ್ವಸಿದ್ದು, ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವ್ರಾಜ್, ನಟಿ ಹರಿಪ್ರಿಯಾ ಹಾಗೂ ಹರ್ಷ ಮಾಸ್ಟರ್ ಈ ಶೋನ ಜಡ್ಜ್ಗಳಾಗಿ ಕೊಟ್ಟ ಜವಬ್ದಾರಿಯನ್ನಾ ಅಚ್ಚು ಕಟ್ಟಾಗಿ ನಿಭಾಯಿಸಿದ್ದಾರೆ. ವಾರ ವಾರ ಹೊಸ ಥೀಮ್ನೊಂದಿಗೆ ನಿಮ್ಮ ಮುಂದೆ ಬರ್ತಿದ್ದಾ ಸ್ಪರ್ಧಿಗಳು ಫಿನಾಲೆಗೆ ವಿಭಿನ್ನಾ ಥೀಮ್ ನೊಂದಿಗೆ ನಿಮ್ಮನ್ನ ರಂಜಿಸಲಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಸ್ಪರ್ಧಿಗಳಿಗೆ ನಮ್ಮ ಕಡೆಯಿಂದ ಆಲ್ ದ ಬೆಸ್ಟ್.