ನಾಳೆ ‘ಸಖತ್’​​ ಮನರಂಜನೆ ನೀಡಲು ಬರ್ತಿದ್ದಾರೆ ಗೋಲ್ಡನ್​​ ಸ್ಟಾರ್​​ ಗಣೇಶ್​

ನಾಳೆ ಅಂದರೆ ನವೆಂಬರ್​ 26ಕ್ಕೆ ಗೋಲ್ಡನ್​ ಸ್ಟಾರ್​ ಗಣೇಶ್​ ಅಭಿನಯದ ”ಸಖತ್”​ ಸಿನಿಮಾ ರಾಜ್ಯಾದ್ಯಂತ ”ಸಖತ್​” ಆಗಿ ಬಿಡುಗಡೆ ಆಗಲಿದೆ. ಚಿತ್ರಕ್ಕೆ ಸಿಂಪಲ್​ ಸುನಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ‘ಸಖತ್”​ ಸಿನಿಮಾದೊಂದಿಗೆ ಸಿಂಪಲ್​ ಸುನಿ 2ನೇ ಬಾರಿ ಗಣೇಶ್​ ಜೊತೆ ಕೆಲಸ ಮಾಡುವ ಅವಕಾಶವನ್ನು ಪಡೆದಿದ್ದಾರೆ.

ಈ ಹಿಂದೆ ಗಣೇಶ್​ ಮತ್ತು ರಶ್ಮಿಕಾ ಮಂದಣ್ಣ ಕಾಂಬೀನೇಶನ್​ನಲ್ಲಿ ”ಚಮಕ್’​’ ಸಿನಿಮಾ ಮಾಡಿ ಗೆದ್ದಿದ್ರು ಸುನಿ. ಈಗಾಗಲೆ ಸಖತ್​ ಸಿನಿಮಾದ ಟ್ರೈಲರ್​ ಮತ್ತು ಹಾಡುಗಳು ”ಸಖತ್​” ಆಗಿ ಸೌಂಡ್​ ಮಾಡ್ತಿದೆ. ”ಸಖತ್”​ ಸಿನಿಮಾಗೆ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದು, ಕೆ ವಿ ಎನ್​ ನಿರ್ಮಾಣ ಸಂಸ್ಥೆ ಡವಾಳ ಹೂಡಿದೆ. ಇನ್ನೇನು ”ಸಖತ್”​ ಸಿನಿಮಾ ಬಿಡುಗಡೆಗೆ ತುದಿಗಾಲಲ್ಲಿ ನಿಂತಿದ್ದು, ಪ್ರೇಕ್ಷರು ”ಸಖತ್”​ ಸಿನಿಮಾವನ್ನು ಯಾವ ರೀತಿ ತೆಗೆದುಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

The post ನಾಳೆ ‘ಸಖತ್’​​ ಮನರಂಜನೆ ನೀಡಲು ಬರ್ತಿದ್ದಾರೆ ಗೋಲ್ಡನ್​​ ಸ್ಟಾರ್​​ ಗಣೇಶ್​ appeared first on News First Kannada.

News First Live Kannada

Leave a comment

Your email address will not be published. Required fields are marked *