ಬೆಂಗಳೂರು: ನಾಳೆ ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಹಿನ್ನೆಲೆಯಲ್ಲಿ ರಾಜ್ಯದ ಮೂವರು ಸಂಸದರಿಗೆ ಕೇಂದ್ರದ ನಾಯಕರು ಕರೆ ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ನ್ಯೂಸ್​ಫಸ್ಟ್​ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಡಾ.ಉಮೇಶ್ ಜಾಧವ್, ರಮೇಶ್ ಜಿಗಜಿಣಗಿ ಹಾಗೂ ಎ‌. ನಾರಾಯಣಸ್ವಾಮಿ ಕೇಂದ್ರದ ನಾಯಕರು ಕರೆ ಮಾಡಿದ್ದಾರೆ. ಕೇಂದ್ರ ನಾಯಕರ ಕರೆ ಹಿನ್ನೆಲೆಯಲ್ಲಿ ಮೂವರು ದಲಿತ ಸಂಸದರು ದೆಹಲಿಗೆ ದೌಡಾಯಿಸಿದ್ದಾರೆ.

ರಮೇಶ್ ಜಿಗಜಿಣಗಿ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ. ಡಾ.ಉಮೇಶ್ ಜಾಧವ್ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ. ಎ.ನಾರಾಯಣಸ್ವಾಮಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ. ಕೇಂದ್ರದ ಬಿಜೆಪಿ ಪ್ರಮುಖರು ಕರೆ ಮಾಡಿರುವ ಹಿನ್ನೆಲೆಯಲ್ಲಿ ರಾತ್ರಿ 8 ಗಂಟೆಗೆ ಮೂವರು ಸಂಸದರುಗಳು ದೆಹಲಿ ತಲುಪಿದ್ದಾರೆ.

The post ನಾಳೆ ಸಚಿವ ಸಂಪುಟ ಪುನರ್​​ ರಚನೆ; ಮೂವರು ಸಂಸದರಿಗೆ ಬುಲಾವ್​​, ಯಾರಿಗಿದೆ ಲಕ್​? appeared first on News First Kannada.

Source: newsfirstlive.com

Source link