ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ 100ದಿನಗಳನ್ನ ಪೂರೈಸಿದ್ದಾರೆ. ಆದ್ರೆ ಅವರು ಸಿಎಂ ಆದ ಕೆಲವೇ ತಿಂಗಳಲ್ಲಿ ಪದೇ ಪದೇ ಭೇಟಿ ನೀಡ್ತಿರೋದು ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ಹೀಗಿರೋವಾಗ್ಲೆ ನಾಳೆ ಮತ್ತೆ ದೆಹಲಿಯತ್ತ ಸಿಎಂ ಹೊರಟಿದ್ದಾರೆ.
ಯೆಸ್, ಜುಲೈ 28, 2021ರಂದು ಬಸನರಾಜ್ ಬೊಮ್ಮಾಯಿ ಕರ್ನಾಟಕದ 30 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಬೊಮ್ಮಾಯಿ ಸಿಎಂ ಗದ್ದುಗೆ ಏರಿದ ಸನ್ನಿವೇಶ ಮತ್ತು ಸಂದರ್ಭ ಯಾರಿಗೂ ತಿಳಿಯದ ಗುಟ್ಟೆನಲ್ಲ. ಅನಿರೀಕ್ಷಿತವೋ, ಅದೃಷ್ಟವೋ ಎಂಬಂತೆ ಹೈ ಕಮಾಂಡ್ ಬೊಮ್ಮಾಯಿಗೆ ಮಣೆ ಹಾಕಿತ್ತು. ಆದ್ರೆ, ಬೊಮ್ಮಾಯಿಯವರು ಪದೇ ಪದೇ ದೆಹಲಿಯತ್ತ ಮುಖ ಮಾಡ್ತಿರೋದು ಹಲವು ಚರ್ಚೆಗಳನ್ನ ಹುಟ್ಟು ಹಾಕಿದೆ.
ದೆಹಲಿ ಭೇಟಿಯ ಗುಟ್ಟೇನು?
ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ ದೆಹಲಿಗೆ ಬೊಮ್ಮಾಯಿ 6ನೇ ಬಾರಿ ಭೇಟಿ ನೀಡ್ತಿದ್ದಾರೆ. ಪ್ರತಿ ವಿಚಾರ ಹೈ ಕಮಾಂಡ್ ಗಮನಕ್ಕೆ ತಂದ ಬಳಿಕವೇ ನಿರ್ಧಾರ ಕೈಗೊಳ್ತಿದ್ದಾರೆ. ರಾಜ್ಯ ಸರ್ಕಾರ ಸುಸೂತ್ರವಾಗಿ ನಡೆಯಲು ಇದುವೇ ಬಲವಾಗಿದ್ದು, ದೆಹಲಿಗೆ ಭೇಟಿ ನೀಡಿ ಬೊಮ್ಮಾಯಿ ರಕ್ಷಾ ಕವಚ ರಚಿಸಿಕೊಳ್ತಿದ್ದಾರಾ? ಎಂಬ ಮಾತುಗಳು ಕೂಡ ಕೇಳಿಬರ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಸಿಎಂ ಬಿಎಸ್‌ವೈಗೆ ಇದ್ದ ಬಂಡಾಯ ಒಳಬೇಗುದಿ ಇವರಿಗಿಲ್ಲ.
ಇದೀಗ ಮತ್ತೆ ದೆಹಲಿಗೆ ತೆರಳಲು ಸಿಎಂ ಬೊಮ್ಮಾಯಿ ಸಿದ್ಧತೆ ನಡೆಸಿದ್ದಾರೆ. ಈಗಾಗ್ಲೆ ಹೈಕಮಾಂಡ್ ನಾಯಕರ ಭೇಟಿಗೂ ಸಮಯ ನಿಗದಿಯಾಗಿದೆ. ಇನ್ನು ಈ ಬಾರಿಯ ದೇಹಲಿ ಭೇಟಿಗೆ ನೀಡಿರೋ ಕಾರಣಗಳನ್ನ ಗಮನಿಸೋದಾದ್ರೆ,.
ಸಿಎಂ ಪ್ರವಾಸದ ‘ಹೈ’ ಪ್ಲಾನ್
- ರಾಜ್ಯದಲ್ಲಿ ಇತ್ತೀಚಿಗೆ ನಡೆದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲು ಸಿದ್ಧತೆ
- ಎರಡು ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ ಫಲಿತಾಂಶದ ಮಾಹಿತಿ ಸಲ್ಲಿಕೆ
- ಮುಂಬರುವ ಪರಿಷತ್ ಚುನಾವಣೆಗೆ ಕೈಗೊಳ್ಳುತ್ತಿರುವ ಸಿದ್ಧತೆ ಬಗ್ಗೆ ಮಾಹಿತಿ
- 2023ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಹೇಗಿದೆ ಎಂಬ ಮಾಹಿತಿ ಸಲ್ಲಿಕೆ
- ಸಚಿವ ಸಂಪುಟದಲ್ಲಿ ಖಾಲಿಯಿರುವ ಸ್ಥಾನಗಳ ಭರ್ತಿ ಬಗ್ಗೆ ಚರ್ಚೆ ಸಾಧ್ಯತೆ
ಸಾಧ್ಯವಾದರೆ, ಸಂಪುಟ ಪುನಾರಚನೆಗೆ ಹೈಕಮಾಂಡ್ ಮುಂದೆ ಪ್ರಸ್ತಾವನೆ
ಸಿಎಂ ಮಾಡಿದ್ದೆ ಹೈಕಮಾಂಡ್ ಅಂತಾನೋ? ಅಥವಾ ತಮಗೆ ರಕ್ಷಾ ಕವಚವಾಗಿರುತ್ತೆ ಅಂತಾನೋ? ಗೊತ್ತಿಲ್ಲ. ಒಟ್ಟಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಸಲದ ದೇಹಲಿ ಭೇಟಿಗೂ ಒಂದೊಂದು ಕಾರಣ ನೀಡಿ ಪದೇ ಪದೆ ದೆಹಲಿಯತ್ತ ಹೊರಡ್ತಿದ್ದಾರೆ. ಹಾಗೆ ನಾಳೆ ಕೂಡ ಸಿಎಂ ದೆಹಲಿಗೆ ಹೊರಡಲಿದ್ದು ಈ ಭೇಟಿಯು ಪ್ರಾಮುಖ್ಯತೆ ಪಡೆದಿದೆ.