ನವದೆಹಲಿ: ಬಾಲಿವುಡ್ ನಟ ಆಮಿರ್ ಖಾನ್ ಮತ್ತು ಕಿರಣ್ ರಾವ್ ಡಿವೋರ್ಸ್ ಮಾಡಿಕೊಂಡ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದ್ದಾರೆ. ಈ ಮಧ್ಯೆ ಆಮಿರ್ ಖಾನ್ ಇತ್ತೀಚೆಗೆ ನಟಿ ಕರೀನಾ ಕಪೂರ್ ಕುರಿತು ಮಾತನಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಾಲಿವುಡ್​​ನ ಎವರ್​ಗ್ರೀನ್ ಸಿನಿಮಾ ಫಾರೆಸ್ಟ್​ ಗಂಪ್ ಸಿನಿಮಾದ ರೀಮೇಕ್ ಲಾಲ್ ಸಿಂಗ್ ಚಡ್ಡಾದ ಶೂಟಿಂಗ್ ಸಮಯದ ಇಂಟರ್​ವ್ಯೂ ಒಂದರಲ್ಲಿ ಆಮಿರ್ ಖಾನ್ ತಮ್ಮ ಜೊತೆ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದ ಕರೀನಾ ಕಪೂರ್​ ಬಗ್ಗೆ ಹಾಸ್ಯ ಮಾಡಿದ್ದಾರೆ. ಇಡೀ ದೇಶ ಕೊರೊನಾ ಜೊತೆ ಹೋರಾಡುತ್ತಿದೆ. ಆದ್ರೆ ನಾವಿಲ್ಲಿ ಕೊರೊನಾ ಜೊತೆಗೆ ಕರೀನಾ ಜೊತೆಗೂ ಹೋರಾಡುತ್ತಿದ್ದೇವೆ.. ಕರೀನಾ ಕಪೂರ್ ಗರ್ಭಿಣಿಯಾಗಿದ್ದರೆ.. ಇದು ಇನ್ನೊಂದು ಸಮಸ್ಯೆ ಎಂದಿದ್ದಾರೆ.

ಕರೀನಾ ಕಪೂರ್ ಗರ್ಭಿಣಿಯಾಗಿದ್ದಾಗಲೂ ಸಹ ಲಾಲ್​ ಸಿಂಗ್ ಚಡ್ಡಾ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು.. ಹೀಗಾಗಿ ಕೊರೊನಾ ಜೊತೆಗೆ ಗರ್ಭಿಣಿಯಾಗಿರೋ ಕರೀನಾ ಜೊತೆಗೂ ನಾವಿಲ್ಲಿ ಹೋರಾಡುತ್ತಿದ್ದೇವೆ ಎಂದು ಹ್ಯೂಮರಸ್​ ಆಗಿ ಆಮಿರ್ ಮಾತಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

The post ನಾವಿಲ್ಲಿ ಕೊರೊನಾ.. ಕರೀನಾ ಇಬ್ಬರ ಜೊತೆಗೂ ಹೋರಾಡುತ್ತಿದ್ದೇವೆ- ಕಾಲೆಳೆದ ಆಮಿರ್ appeared first on News First Kannada.

Source: newsfirstlive.com

Source link