ನಾವು ಅಳುವುದಿಲ್ಲ ಅಭಿವೃದ್ಧಿ ಕೆಲಸ ಮಾಡಿ ತೋರಿಸ್ತೇವೆ ಎಂದ ಸಚಿವ ಅಶ್ವತ್ಥ್ ನಾರಾಯಣಗೆ ಹೆಚ್​ಡಿ ಕುಮಾರಸ್ವಾಮಿ ಖಡಕ್ ತಿರುಗೇಟು | We don’t cry and show development work minister ashwath Narayan slams HD Kumaraswamy


ನಾವು ಅಳುವುದಿಲ್ಲ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿಗೆ ಸಚಿವ ಅಶ್ವತ್ಥ್ ನಾರಾಯಣ ಟಾಂಗ್ ಕೊಟ್ಟಿದ್ದಾರೆ.

ನಾವು ಅಳುವುದಿಲ್ಲ ಅಭಿವೃದ್ಧಿ ಕೆಲಸ ಮಾಡಿ ತೋರಿಸ್ತೇವೆ ಎಂದ ಸಚಿವ ಅಶ್ವತ್ಥ್ ನಾರಾಯಣಗೆ ಹೆಚ್​ಡಿ ಕುಮಾರಸ್ವಾಮಿ ಖಡಕ್ ತಿರುಗೇಟು

ಹೆಚ್​ ಡಿ ಕುಮಾರಸ್ವಾಮಿ

ಮಂಡ್ಯ: ನಾವು ಅಳುವುದಿಲ್ಲ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿಗೆ(HD Kumaraswamy) ಸಚಿವ ಅಶ್ವತ್ಥ್ ನಾರಾಯಣ(Ashwath Narayana) ಟಾಂಗ್ ಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆಯಿಂದಲೇ ಬಾವುಟವನ್ನು ಹಾರಿಸಿ ತೋರಿಸುತ್ತೇವೆ ಎಂದು ಮಂಡ್ಯ ವಿವಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ರು.

ಮೈಶುಗರ್ ಕಾರ್ಖಾನೆಗೆ ಸಿಎಂ 50 ಕೋಟಿ ಹಣ ನೀಡಿದ್ದಾರೆ. 50 ಕೋಟಿ ಜೊತೆಗೆ 108 ಕೋಟಿ ಎಥಿನಾಲ್ ಪಾಯಿಂಟ್ ಅವಕಾಶವಿದೆ. ಮುಖ್ಯಮಂತ್ರಿಗಳ ಋಣವನ್ನ ತೀರಿಸಲು ನಾವು ಸಿದ್ಧರಾಗಬೇಕು. ಮುಂದಿನ ದಿನಗಳಲ್ಲಿ 1 ಲಕ್ಷ ಜನರು ಸೇರಿಸುವ ಮೂಲಕ ಧನ್ಯವಾದವನ್ನ ತಿಳಿಸುವಂತ ಕೆಲಸ ಆಗಬೇಕಿದೆ ಎಂದರು.

ಅಧಿಕಾರ ಹೋಯ್ತು ಎಂದು ನಾನು ಕಣ್ಣೀರು ಹಾಕುವುದಿಲ್ಲ

ಇನ್ನು ಮತ್ತೊಂದು ಕಡೆ ಸಚಿವ ಅಶ್ವತ್ಥ್ ನಾರಾಯಣ ಮಾತಿಗೆ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಅಧಿಕಾರ ಹೋಯ್ತು ಎಂದು ನಾನು ಕಣ್ಣೀರು ಹಾಕುವುದಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣಗೆ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

ತುಮಕೂರಿನ ದಂಪತಿಯ ಪರಿಸ್ಥಿತಿ ಕಂಡು ಕಣ್ಣೀರು ಬರುತ್ತೆ. ನೀನು ನನ್ನ ಕಣ್ಣೀರಿನ ಬಗ್ಗೆ ಮಾತನಾಡುತ್ತೀಯಾ. ನಿನ್ನ ಹತ್ತಿರ ಸೂಟ್ಕೇಸ್ ತರುವವರು ಬರುತ್ತಾರೆ. ಪಾಪ ಜನರ ಕಷ್ಟ ನಿನಗೆ ಹೇಗೆ ಗೊತ್ತಾಗಬೇಕು? ಕೇವಲ ಹಣದಿಂದಲೇ ಚುನಾವಣೆ ಗೆಲ್ಲಲು ಆಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಇದಕ್ಕೆಲ್ಲ ಉತ್ತರ ಸಿಗುತ್ತದೆ. ದಂಧೆಕೋರರು ಬೆಂಗಳೂರಿನಿಂದ ಶ್ರೀಲಂಕಾಗೆ ಓಡಿಹೋಗಿದ್ರು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *