‘ನಾವು ಎಲ್ಲವನ್ನು ಎದುರಿಸುತ್ತಾ ಸಾಗಬೇಕು’; ರಾಜ್​ ಪುಣ್ಯಸ್ಮರಣೆ ದಿನ ಶಿವಣ್ಣ ಮಾತು | Shivarajkumar Talks about grief in Rajkumar family


ಈ ನೊವಿನ ಜತೆಗೆ ನಾವು ಸಾಗಬೇಕಿದೆ. ಈ ಬಗ್ಗೆ ಶಿವರಾಜ್​ಕುಮಾರ್ ಅವರು ಮಾತನಾಡಿದ್ದಾರೆ. ಈ ವೇಳೆ ಶಿವಣ್ಣ ಭಾವುಕರಾದರು.

[embed]https://www.youtube.com/watch?v=mwTLvGRa9kM[/embed]

ಇಂದಿಗೆ (ಏಪ್ರಿಲ್​ 12) ರಾಜ್​ಕುಮಾರ್ (Rajkumar) ನಿಧನ ಹೊಂದಿ 16 ವರ್ಷಗಳು ಉರುಳಿವೆ. ರಾಜ್​ಕುಮಾರ್ ಅವರ ಸ್ಮಾರಕ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿದೆ. ಅಲ್ಲಿಗೆ, ಶಿವರಾಜ್​ಕುಮಾರ್ (Shivarajkumar), ರಾಘವೇಂದ್ರ ರಾಜ್​ಕುಮಾರ್, ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಆಗಮಿಸಿ ಪೂಜೆ ಸಲ್ಲಿಕೆ ಮಾಡಿದರು. ಪುನೀತ್ (Pumeeth) ಅವರ ಸಮಾಧಿ ರಾಜ್​ಕುಮಾರ್ ಸ್ಮಾರಕದ ಸಮೀಪವೇ ಇದೆ. ಹೀಗಾಗಿ, ಅಲ್ಲಿಗೆ ಬಂದಾಗ ಪುನೀತ್ ನೆನಪು ಹೆಚ್ಚು ಕಾಡೋದು ಸಹಜ. ಆದರೆ, ಈ ನೊವಿನ ಜತೆಗೆ ನಾವು ಸಾಗಬೇಕಿದೆ. ಈ ಬಗ್ಗೆ ಶಿವರಾಜ್​ಕುಮಾರ್ ಅವರು ಮಾತನಾಡಿದ್ದಾರೆ. ಈ ವೇಳೆ ಶಿವಣ್ಣ ಭಾವುಕರಾದರು. ಇಂದು ಅಭಿಮಾನಿಗಳು ಸಹ ರಾಜ್​ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.


TV9 Kannada


Leave a Reply

Your email address will not be published.