ಚಾಮರಾಜನಗರ: ಕೋವಿಡ್ ಡ್ಯೂಟಿಗೆ ಹಾಜರಾಗಲು ನರ್ಸ್​ಗಳನ್ನ ಕರೆದರೂ ಬರುತ್ತಿಲ್ಲ ಅಂತ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಚಾಮರಾಜನಗರದಲ್ಲಿ ಮಾತನಾಡಿದ ಅವರು, ಕೊರೊನಾ ವಾರ್ಡ್​​ಗೆ ನರ್ಸ್​ಗಳು ಬರಲು ಹಿಂದೇಟು ಹಾಕುತ್ತಿದ್ದಾರೆ. ನಾವು ಬೇರೆ ಕಡೆ ಬೇಕಾದ್ರೆ ಕೆಲಸ ಮಾಡ್ತೀವಿ, ಆದ್ರೆ ಕೊರೊನಾ ವಾರ್ಡ್​​ನಲ್ಲಿ ಮಾತ್ರ ಕೆಲಸ ಮಾಡಲ್ಲ ಅಂತ ಹೇಳುತ್ತಿದ್ದಾರೆ. ಇಂತಾ ಮನಸ್ಥಿತಿ ಎಲ್ಲ ಕಡೆಯಿದೆ ಎಂದರು.

ನರ್ಸ್​ಗಳು ಕೆಲಸಕ್ಕೆ ಹಾಜರಾಗೊದಾದ್ರೆ, ನಾವು ನಾಳೆಯೇ ನೇಮಕ ಮಾಡಲು ರೆಡಿ ಇದ್ದೇವೆ. ಆದ್ರೆ ಕೋವಿಡ್ ಡ್ಯೂಟಿಗೆ ಅವರು ಬರ್ತಿಲ್ಲ ಅಂತಾ ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರು.

 

The post ‘ನಾವು ಕರೆದರೂ ಕೂಡ, ಕೋವಿಡ್ ಡ್ಯೂಟಿಗೆ ನರ್ಸ್​ಗಳು ಬರ್ತಿಲ್ಲ’ -ಸುರೇಶ್​ ಕುಮಾರ್ appeared first on News First Kannada.

Source: newsfirstlive.com

Source link