ರಾಮನಗರ: ರಾಜ್ಯದ ಜನರ ಆರೋಗ್ಯದ ಕುರಿತು ನಮಗೆ ಕಾಳಜಿ ಇದ್ದು ಅವರ ಹಿತದೃಷ್ಟಿಯಿಂದ ಸದ್ಯ ಮೇಕೆದಾಟು ಪಾದಯಾತ್ರೆಯನ್ನು ಇಲ್ಲಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪಾದಯಾತ್ರೆಗೆ ಬ್ರೇಕ್ ಕುರಿತು ನಾಯಕರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು ಸದ್ಯ ಪಾದಯಾತ್ರೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಜನರ ಆರೋಗ್ಯಕ್ಕೆ ನಾವು ಆದ್ಯತೆ ನೀಡ್ತೇವೆ ಇದರ ನಡುವೆ ಕೋವಿಡ್ 3 ಅಲೆ ಭೀತಿ ಜೋರಾಗ್ತಿದ್ದು ಜನರ ಹಿತದೃಷ್ಟಿಯಿದ ಈ ತೀರ್ಮಾನ ಕೈಗೊಂಡಿರೋದಾಗಿ ಅವ್ರು ತಿಳಿಸಿದರು.
ಇನ್ನು ರಾಜ್ಯದಲ್ಲಿ ಏರಿಕೆಯಾಗುತ್ತಿರುವ ಕೋವಿಡ್ ಕೇಸ್ಗಳಿಗೆ ಪಾದಯಾತ್ರೆಯೇ ಕಾರಣ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು. ಬಿಜೆಪಿ ಶಾಸಕರು, ಸಚಿವರು ಮಾಡ್ತಿರುವ ಱಲಿ ಹಾಗೂ ಜಾತ್ರೆಗಳಿಗೆ ಮಾತ್ರ ಅನುಮತಿಯಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಕ್ಷೇತ್ರದಲ್ಲಿಯೇ ಜಾತ್ರೆಗೆ ಅನುಮತಿ ಕೊಟ್ಟಿದ್ದಾರೆ. ಅವರ ಮೇಲೆ ಯಾವ ಕೇಸ್ ಕೂಡ ಬೀಳಲಿಲ್ಲ. ಆದ್ರೆ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಕೇಸ್ ದಾಖಲಿಸಿದ್ರು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬಿಜೆಪಿಯವ್ರ ಜನಾಶೀವಾರ್ದಕ್ಕೆ ಇರದ ಕೋವಿಡ್ ನಿಯಮಗಳು ನಮ್ಮ ಪಾದಯಾತ್ರೆಗೆ ಯಾಕೆ.? ಈ ಸರ್ಕಾರ ನಿಷ್ಪಕ್ಷಪಾತವಾಗಿಲ್ಲ ನಮ್ಮ ಪಾದಯಾತ್ರೆಯನ್ನ ನಿಲ್ಲಿಸೋದೆ ಅವರ ಉದ್ದೇಶವಾಗಿದೆ. ಇವತ್ತು ದೇಶಾದ್ಯಂತ ಕೋವಿಡ್ ಕೇಸ್ಗಳು ಜಾಸ್ತಿಯಾಗುತ್ತಿವೆ ಆದ್ರೆ ಇದನ್ನು ನಮ್ಮ ತಲೆಗೆ ಕಟ್ಟುವ ಯತ್ನಗಳು ನಡೆದವು. ಇದರಿಂದ ಮುಂದೆ ಜನರಿಗೆ ನಮ್ಮಿಂದಲೇ ಕೋವಿಡ್ ಜಾಸ್ತಿಯಾಯ್ತು ಎಂಬ ತಪ್ಪು ಸಂದೇಶ ರವಾನೆಯಾಗಬಾರದು. ಅದರ ಬೆನ್ನಲ್ಲೆ ಜನರ ಆರೋಗ್ಯದ ದೃಷ್ಟಿಯಿಂದ ನಮ್ಮ ನಡಿಗೆಗೆ ಬ್ರೇಕ್ ಹಾಕಿದ್ದೇವೆ ಎಂದು ಅವರು ವಿವರಿಸಿದರು. ಇನ್ನು ಕೋವಿಡ್ ಅಬ್ಬರ ಕಡಿಮೆಯಾದ ಬಳಿಕ ಮತ್ತೇ ನಮ್ಮ ಪಾದಯಾತ್ರೆ ಮುಂದುವರೆಯುತ್ತದೆ ಎಂದಿದ್ದಾರೆ.