‘ನಾವು ಪಾಕ್​ ಸೂಪರ್​​ ಲೀಗ್​ ಆಡೋಲ್ಲ’ ಎಂದ ಸೌತ್​ ಆಫ್ರಿಕಾ.. ಯಾಕೆ?


ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ, ಪಾಕಿಸ್ತಾನ ಕ್ರಿಕೆಟ್​ ಮಂಡಳಿಗೆ ಆಘಾತ ನೀಡಿದೆ. ಪಾಕಿಸ್ತಾನ್ ಸೂಪರ್ ಲೀಗ್​​ ಆಡುವ ಆಟಗಾರರಿಗೆ ಕ್ರಿಕೆಟ್​ ಸೌತ್​ ಆಫ್ರಿಕಾ NOC ನೀಡಲು ನಿರಾಕರಿಸಿದೆ. ಮುಂದಿನ ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಪ್ರವಾಸಗಳು ಮತ್ತು ದೇಶೀಯ ಸ್ಪರ್ಧೆಗಳು ಹೆಚ್ಚಾಗಿವೆ. ಈ ಟೂರ್ನಿಗಳ ಮೇಲೆ ಆಟಗಾರರು ಹೆಚ್ಚು ಗಮನಹರಿಸಬೇಕು ಎಂದು ಮಂಡಳಿ ಸ್ಪಷ್ಟಪಡಿಸಿದೆ.

ದಕ್ಷಿಣ ಆಫ್ರಿಕಾ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ವಿದೇಶ ಪ್ರವಾಸ ಮತ್ತು ಮಾರ್ಚ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ಸರಣಿಯನ್ನ ಆಡಲಿದೆ. ಹೀಗಾಗಿ ಪಾಕಿಸ್ತಾನ್​ ಸೂಪರ್ ಲೀಗ್​​​​​ ಆಡಲು ಆಟಗಾರರಿಗೆ ಅವಕಾಶ ನೀಡಿಲ್ಲ. ಆದರೆ ಗುತ್ತಿಗೆ ಪಡೆದಿರುವ ದಕ್ಷಿಣ ಆಫ್ರಿಕಾದ ಆಟಗಾರರು ಪಿಎಸ್‌ಎಲ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಕ್ರಿಕೆಟ್ ನಿರ್ದೇಶಕ ಗ್ರೇಮ್ ಸ್ಮಿತ್ ಖಚಿತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ದೇಶೀಯ ಕ್ರಿಕೆಟ್ ಟೂರ್ನಿಗಳು ಹೆಚ್ಚಾಗಿ ನಡೆಯಲಿವೆ. ಹೀಗಾಗಿ ಆಟಗಾರರಿಗೆ ಪಿಎಸ್​ಎಲ್​ ಆಡೋದಕ್ಕೆ ಅವಕಾಶ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಿಎಸ್​​ಎಲ್​ ಜನವರಿ 27ರಿಂದ ಶುರುವಾಗಲಿದ್ದು, ಫೆಬ್ರುವರಿ 27ರವರೆಗೆ ಒಂದು ತಿಂಗಳ ಕಾಲ ನಡೆಯಲಿದೆ.

News First Live Kannada


Leave a Reply

Your email address will not be published. Required fields are marked *