‘ನಾವು ಬೇರೆ ಭಾಷೆಯಲ್ಲಿ ಮಾತಾಡ್ತೀವಿ, ಅದು ಯಾವುದು ಅಂತ ಈಗ ಬೇಡ’: ವೇದಿಕೆಯಲ್ಲಿ ಶಿವಣ್ಣ ಮನದ ಮಾತು | Shivarajkumar talks about Vikram Ravichandran in Trivikrama pre release event‘ತ್ರಿವಿಕ್ರಮ’ ಸಿನಿಮಾದ ಹೀರೋ ವಿಕ್ರಮ್​ ರವಿಚಂದ್ರನ್​ ಬಗ್ಗೆ ಶಿವರಾಜ್​ಕುಮಾರ್​ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಆ ವಿಡಿಯೋ ಇಲ್ಲಿದೆ..

TV9kannada Web Team


| Edited By: Madan Kumar

Jun 20, 2022 | 10:15 AM
‘ಕ್ರೇಜಿ ಸ್ಟಾರ್​’ ರವಿಚಂದ್ರನ್ (Ravichandran) ​ ಪುತ್ರ ವಿಕ್ರಮ್​ ರವಿಚಂದ್ರನ್​ ನಟನೆಯ ‘ತ್ರಿವಿಕ್ರಮ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕೆ ಅದ್ದೂರಿ ಪ್ರೀ-ರಿಲೀಸ್​ ಇವೆಂಟ್​ ಮಾಡಲಾಗಿದೆ. ಭಾನುವಾರ (ಜೂನ್​ 19) ಸಂಜೆ ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಶಿವರಾಜ್​ಕುಮಾರ್​ (Shivarajkumar) ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವರು ರವಿಚಂದ್ರನ್​ ಮಕ್ಕಳ ಬಗ್ಗೆ ಮನಸಾರೆ ಮಾತನಾಡಿದರು. ಕೆಲವೇ ದಿನಗಳ ಹಿಂದೆ ವಿಕ್ರಮ್​ ರವಿಚಂದ್ರನ್​ (Vikram Ravichandran) ಅವರು ಕರೆ ಮಾಡಿದ್ದರ ಬಗ್ಗೆಯೂ ಅವರು ವಿವರ ನೀಡಿದರು. ‘ವಿಕ್ಕಿ ಅಂದು ಫೋನ್​ ಮಾಡಿದ್ದ. ಸಾಮಾನ್ಯವಾಗಿ ನಾವು ಬೇರೆ ಭಾಷೆಯಲ್ಲಿ ಮಾತಾಡ್ತೀವಿ. ಅದು ಯಾವ ಭಾಷೆ ಅಂತ ಇವಾಗ ಹೇಳೋದು ಬೇಡ’ ಎಂದು ಗುಟ್ಟು ಕಾಯ್ದುಕೊಂಡರು ಶಿವಣ್ಣ. ‘ವಿಕ್ಕಿಯ ಡ್ಯಾನ್ಸ್​ ನೋಡಿ ನನಗೆ ನನ್ನ ತಮ್ಮ ಅಪ್ಪು ನೋಡಿದಂತೆ ಆಯ್ತು’ ಎಂದು ಕೂಡ ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published.