ನಾವು ಮನಸ್ಸು ಮಾಡಿದ್ರೆ ಒಬ್ಬನೇ ಒಬ್ಬ ಬಿಜೆಪಿ ಲೀಡರ್ ಓಡಾಡಲು ಆಗಲ್ಲ: ಖಡಕ್ ಎಚ್ಚರಿಕೆ ಕೊಟ್ಟ ಪ್ರಿಯಾಂಕ್ ಖರ್ಗೆ – Not a single BJP leader will be able to move around if we make up our mind: Priyank Kharge


ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದವರಿಗೆ ಸಹನೆ ಇರಬೇಕು. ನನಗೆ ನಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರಷ್ಟು ಸಹನಶಕ್ತಿ ಇಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ನಾವು ಮನಸ್ಸು ಮಾಡಿದ್ರೆ ಒಬ್ಬನೇ ಒಬ್ಬ ಬಿಜೆಪಿ ಲೀಡರ್ ಓಡಾಡಲು ಆಗಲ್ಲ: ಖಡಕ್ ಎಚ್ಚರಿಕೆ ಕೊಟ್ಟ ಪ್ರಿಯಾಂಕ್ ಖರ್ಗೆ

ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ

ಕಲಬುರಗಿ: ನಾವು ಮನಸ್ಸು ಮಾಡಿದರೆ ಬಿಜೆಪಿಯ ಒಬ್ಬ ನಾಯಕ ಓಡಾಡಲು ಆಗಲ್ಲ. ಇದನ್ನು ಬೆದರಿಕೆ ಎಂದು ಬೇಕಾದ್ರೂ ತಿಳಿದುಕೊಳ್ಳಿ, ಏನಾದ್ರೂ ಅಂದ್ಕೊಳ್ಳಿ ಎಂದು ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಅಂಟಿಸಿದ್ದ ಬಿಜೆಪಿಗೆ ತಿರುಗೇಟು ನೀಡಿದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮೂಲತಃ ಶಾಂತ ಸ್ವಭಾವದವರಾಗಿದ್ದು, ಅದೇ ರೀತಿಯಾಗಿ ರಾಜಕಾರಣ ಮಾಡಿಕೊಂಡು ಬಂದವರು. ಆದರೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ರಾಜಕೀಯದಲ್ಲಿ ನನಗೆ ನಿಮಗಿಂತ ನೂರು ಪಟ್ಟು ಹೆಚ್ಚು ಅನುಭವವಿದೆ ಎಂದು ಬಿಜೆಪಿಯವರ ವಿರುದ್ಧ ತೊಡೆತಟ್ಟಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್​ ಪಕ್ಷದವರು ಸತ್ತೋಗಿಲ್ಲ. ನಾವು ಮನಸ್ಸು ಮಾಡಿದ್ರೆ ಒಬ್ಬನೇ ಒಬ್ಬ ಬಿಜೆಪಿ ಲೀಡರ್​ ಓಡಾಡಲಾಗಲ್ಲ. ನಿಮಗೆ ಅಂತಹ ವಾತಾವರಣ ಬೇಕಿದ್ದರೆ ಅದಕ್ಕೂ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದವರಿಗೆ ಸಹನೆ ಇರಬೇಕು. ನನಗೆ ನಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರಷ್ಟು ಸಹನಶಕ್ತಿ ಇಲ್ಲ. ಆದರೆ ಭಗವಾನ್ ಬುದ್ಧ, ಜಗಜ್ಯೋತಿ ಬಸವೇಶ್ವರರ ತತ್ವ ಎಷ್ಟಿದೆಯೋ, ಭಾರತ ರತ್ನ ಡಾ.ಅಂಬೇಡ್ಕರ್​​ರವರ ಹೋರಾಟದ ರಕ್ತವೂ ಇದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.