ನಾವು ಹಗರಣದ ಬಗ್ಗೆ ತನಿಖೆ ನಡೆಸಲು ಇದೇನು ನಮ್ಮ ಸರ್ಕಾರವೇ: ಡಿಕೆ ಶಿವಕುಮಾರ್ | DK Shivakumar and Siddaramaiah on Karnataka Politics Bitcoin issue


ನಾವು ಹಗರಣದ ಬಗ್ಗೆ ತನಿಖೆ ನಡೆಸಲು ಇದೇನು ನಮ್ಮ ಸರ್ಕಾರವೇ: ಡಿಕೆ ಶಿವಕುಮಾರ್

ಡಿ.ಕೆ.ಶಿವಕುಮಾರ್

ಬೆಂಗಳೂರು: ಬಿಟ್​ಕಾಯಿನ್ ಹಗರಣದಲ್ಲಿ ಭಾಗಿಯಾದವ್ರ ಹೆಸರು ಅವರಿಗೆ ಗೊತ್ತಾಗಬೇಕು. ಅವರದ್ದೇ ಸರ್ಕಾರವಿದೆ, ಆಗಲ್ಲವಂದ್ರೆ ಅಧಿಕಾರ ಬಿಟ್ಟು ಹೋಗ್ಲಿ. 2018ರಲ್ಲಿ ನಾನು ಸಿಎಂ ಸ್ಥಾನದಲ್ಲಿ ಇದ್ದಿದ್ದು ನಿಜ ಇಲ್ಲವೆನ್ನಲ್ಲ. ಬಿಟ್‌ಕಾಯಿನ್ ಹಗರಣ ಬಗ್ಗೆ ಆಗ ಯಾರೂ ದೂರು ಕೊಟ್ಟಿಲ್ಲ. ಕೇಸ್ ದಾಖಲಾಗದೆ ನಮಗೆ ಹೇಗೆ ಗೊತ್ತಾಗುತ್ತೆ. ಒಂದು ವೇಳೆ ಬಿಜೆಯವರಿಗೆ ಗೊತ್ತಿದ್ದರೆ ಯಾಕೆ ಸುಮ್ಮನಿದ್ದರು? ಆಗ ಜವಾಬ್ದಾರಿಯುತ ವಿಪಕ್ಷ ಸ್ಥಾನದಲ್ಲಿದ್ದವ್ರು ಹೊರತರಬೇಕಿತ್ತು. ಅಂದು ಸುಮ್ಮನೆ ಇದ್ದಿದ್ದು ಏಕೆ?, ಇದೆಲ್ಲಾ ಬಿಜೆಪಿ ಅವರಿಗೆ ಕೇಳಿ ಎಂದು ಸಂಚಲನ ಮೂಡಿಸಿರುವ ಬಿಟ್‌ಕಾಯಿನ್ ಹಗರಣ ವಿಚಾರವಾಗಿ ಬೆಂಗಳೂರಿನಲ್ಲಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ನಾವು ಬಿಜೆಪಿ ನಾಯಕರ ಪ್ರಶ್ನೆಗೆ ಉತ್ತರ ನೀಡುವ ಮೊದಲು ರಣದೀಪ್‌ ಸುರ್ಜೇವಾಲ ಕೇಳಿರುವ ಪ್ರಶ್ನೆಗೆ ಉತ್ತರ ಕೊಡಲಿ. ನಲಪಾಡ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಆಗ ಯಾವುದೇ ಬಿಟ್‌ಕಾಯಿನ್ ಕೇಸ್‌ ಬಗ್ಗೆ ಕೇಳಿಬಂದಿರಲಿಲ್ಲ. ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ನಡೆದಿರುವ ಪ್ರಕರಣವಿದು. ಉತ್ತರ ನೀಡಲು ಆರ್.ಅಶೋಕ್ ಅಂದು ಗೃಹಸಚಿವರಾಗಿರಲಿಲ್ಲ. ಕೇಸ್‌ನಲ್ಲಿ ಯಾರಿದ್ದಾರೆಂದು ಬೊಮ್ಮಾಯಿ ಬಹಿರಂಗಗೊಳಿಸಲಿ ಎಂದು ಸಿಎಂ ಬೊಮ್ಮಾಯಿಗೆ ವಿಪಕ್ಷನಾಯಕ ಸಿದ್ದರಾಮಯ್ಯ ಆಗ್ರಹ ವ್ಯಕ್ತಪಡಿಸಿದ್ದಾರೆ.

ಬಿಟ್​ ಕಾಯಿನ್​ ಹಗರಣದ ಬಗ್ಗೆ ಬಿಜೆಪಿಯಿಂದಲೇ ಮಾಹಿತಿ ಸಿಕ್ಕಿದೆ. ಹಗರಣದ ಬಗ್ಗೆ ಬಿಜೆಪಿಯವರೇ ನಮಗೆ ಮಾಹಿತಿ ನೀಡ್ತಿದ್ದಾರೆ ಎಂದು ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ಹಗರಣದ ಬಗ್ಗೆ ತನಿಖೆ ನಡೆಸಲು ನಮ್ಮ ಬಳಿ ಸರ್ಕಾರವಿಲ್ಲ. ಏನೂ ಇಲ್ಲ ಅಂದ ಮೇಲೆ ಚಾರ್ಜ್​ಶೀಟ್​ ಏಕೆ ಹಾಕಿದ್ರಿ. ಜಾರಿ ನಿರ್ದೇಶನಾಲಯಕ್ಕೆ ಏಕೆ ತನಿಖೆಗೆ ಬರೆದಿದ್ದೀರಿ? ಎಂದು ಡಿ.ಕೆ. ಶಿವಕುಮಾರ್​ ಪ್ರಶ್ನೆ ಮಾಡಿದ್ದಾರೆ.

ನಮ್ಮ ಬಳಿ ಸರ್ಕಾರ ಇಲ್ಲ. ನಮ್ಮ ಬಳಿ ಅವರು ಕೊಡ್ತಿರುವ ಮಾಹಿತಿಯಷ್ಟೇ ಇದೆ. ಇಬ್ಬರು ಮಂತ್ರಿಗಳು ಗಾಸಿಪ್ ಮಾಡ್ತಿದ್ದಾರೆ ಎಂದಿದ್ದಾರೆ. ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಯಾರು ಆ ಸಚಿವರು, ಅವರ ಮೇಲೆ ಏಕೆ ಕ್ರಮವಿಲ್ಲ? ಏನೂ ಇಲ್ಲ ಅಂದ್ರೆ ಚಾರ್ಜ್‌ಶೀಟ್ ಏಕೆ ದಾಖಲಿಸಿದ್ರು? ಏನೂ ಇಲ್ಲ ಅಂದ್ರೆ ಅಂದೇ ಹೇಳಬೇಕಿತ್ತು. ಬಿಟ್ ಕಾಯಿನ್ ನಿಮ್ಮ ಬಳಿ ಇಟ್ಕೊಂಡು ಹೀಗೆ ಹೇಳ್ತೀರಾ? ಯಾಕೆ ಇಡಿಗೆ ಬರೆದ್ರಿ? ಇಡಿಗೆ ಬರೆಯೋದು ಸರ್ಕಾರದ ನಿರ್ಧಾರ, ವೈಯಕ್ತಿಕ ಅಲ್ಲ. ಬೆಂಕಿ‌ ಇಲ್ಲದೇ ಹೊಗೆ ಆಡುತ್ತಾ ಎಂದು ಡಿಕೆಶಿ ಕೇಳಿದ್ದಾರೆ.

ಒಬ್ಬ ವ್ಯಕ್ತಿ ಪ್ರಧಾನಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಎಲ್ಲ ಮಾಹಿತಿ ನೀಡಿದ್ದಾರೆ. ಮಂತ್ರಿಗಳ ಹೆಸರು ಸೇರಿ ಎಲ್ಲವನ್ನೂ ಉಲ್ಲೇಖ ಮಾಡಿದ್ದಾರೆ. ಅದು ಸುಳ್ಳಾಗಿದ್ದರೆ ಪತ್ರ ಬರೆದವರ ಮೇಲೆ ಏಕೆ ಕ್ರಮವಿಲ್ಲ? ಪಾಪ ಆ ಹುಡುಗ ತಪ್ಪಿಸಿಕೊಂಡು ಹೋಗಿ ಸರೆಂಡರ್ ಆದ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಬಿಟ್​ಕಾಯಿನ್ ಪ್ರಕರಣ: ದಾಖಲೆ ಕೊಟ್ಟ 1 ಗಂಟೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ: ಕಾಂಗ್ರೆಸ್​ ಆರೋಪಕ್ಕೆ ಆರ್ ಅಶೋಕ್ ಸವಾಲ್

ಇದನ್ನೂ ಓದಿ: ಡ್ರಗ್ಸ್​ ತನಿಖೆ ದಾರಿ ತಪ್ಪಿಸಲೆಂದೇ ಬಿಟ್​ ಕಾಯಿನ್ ಮುನ್ನೆಲೆಗೆ ತಂದ ಕಾಂಗ್ರೆಸ್: ಬಿಜೆಪಿ ನಾಯಕ ಗಂಭೀರ ಆರೋಪ

TV9 Kannada


Leave a Reply

Your email address will not be published.