ದಾವಣಗೆರೆ: ನಾವು 17 ಜನ ಯಡಿಯೂರಪ್ಪ ಅವರನ್ನು ನಂಬಿ ಬಂದಿದ್ದೇವೆ, ಬಿಜೆಪಿಯಲ್ಲಿರುವ 70% ಜನ ಬೇರೆ ಪಕ್ಷದಿಂದ ಬಂದವರು, ಪಕ್ಷಕ್ಕೆ ಸೇರಿದ ಮೇಲೆ ಮೂಲ ಹಾಗೂ ವಲಸಿಗರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕೃಷಿ ಸಚಿವ ಬಿಸಿ ಪಾಟೀಲ್‍ರವರು ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ನಾವು ಪಕ್ಷಕ್ಕೆ ಸೇರಿದ ಮೇಲೆ ಮನೆಗೆ ಬಂದ ಸೊಸೆಯಾದಂತೆ, ಸೊಸೆಯಾಗಿ ಮನೆ ಸೇರಿದ ಮೇಲೆ ಮನೆ ಮಗಳಾಗುತ್ತಾಳೆ. ನಮಗೆ ಯಾವುದೇ ಅನಿಶ್ಚಿತತೆ ಇಲ್ಲ. ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನು ಓದಿ:ಜಿಲ್ಲಾ ಪ್ರವಾಸಕ್ಕೂ ಮುನ್ನವೇ ಸಿಎಂ ಅನ್‍ಲಾಕ್ ಘೋಷಣೆ?

ಐದೂ ಬೆರಳುಗಳೂ ಸಮನಾಗಿರಲ್ಲ, ಒಂದು ಮನೆ ಅಂದ ಮೇಲೆ ಹಲವಾರು ವ್ಯತ್ಯಾಸ ಮನಸ್ತಾಪಗಳು ಇರುತ್ತೆ. ಮಾಧ್ಯಮಗಳ ಪ್ರಶ್ನೆಗಳಿಂದ ರೋಸಿ ಹೋದ ಸಿಎಂ ಈ ರೀತಿ ಹೇಳಿಕೆ ನೀಡಿರಬಹುದು, ಅವರೇನು ತಪ್ಪು ಹೇಳಿಕೆ ನೀಡಿಲ್ಲ. ನಾವು ಪಕ್ಷದ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಸಿಎಂ ಪರ ಸಚಿವ ಬಿ.ಸಿ. ಪಾಟೀಲ್ ಬ್ಯಾಟಿಂಗ್ ಮಾಡಿದ್ದಾರೆ.  ಇದನ್ನು ಓದಿ:ಊರೂರು ಸುತ್ತಿ ಕೊರೊನಾ ಮುಕ್ತಿಗೆ ಪಣತೊಟ್ಟ ಕೊಡಗಿನ ಶಾಸಕರು

The post ನಾವು 17 ಜನ ಯಡಿಯೂರಪ್ಪ ಅವರನ್ನು ನಂಬಿ ಬಂದಿದ್ದೇವೆ: ಬಿ.ಸಿ.ಪಾಟೀಲ್ appeared first on Public TV.

Source: publictv.in

Source link