ಕೊಪ್ಪಳ: ಲಾಕ್ ಡೌನ್ ಹಿನ್ನೆಲೆ ಪೊಲೀಸರು ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಕೊಪ್ಪಳದಲ್ಲಿ ಜನರು ವಿನಾಕಾರಣ ಓಡಾಡದಂತೆ ತಡೆಯುವ ವೇಳೆ ಪೊಲೀಸರು ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದೆ.

ಕುಷ್ಟಗಿ ತಾಲೂಕು ತಾವರಗೇರಾ ಬಳಿ ಕಾರ್​ ಒಂದರಲ್ಲಿ ಮೂವರು ಮಹಿಳೆಯರು ಹಾಗೂ ಓರ್ವ ಯುವಕ ತೆರಳುತ್ತಿದ್ದರು. ಕಾರ್ ತಡೆದ ಪೊಲೀಸರು.. ಕಾರ್ ಸೀಜ್ ಮಾಡೋದಾಗಿ ಹೇಳಿದ್ದಾರೆ. ಈ ವೇಳೆ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ ಮಹಿಳೆಯರು ಅಮಾವಾಸ್ಯೆ ಇರೋದ್ರಿಂದ ದೇವಸ್ಥಾನಕ್ಕೆ ಹೊರಟಿದ್ವಿ.. ನಾವೇನು ಕಳ್ಳತನ ಮಾಡಿಲ್ಲ.. ಯಾಕೆ ಗಾಡಿ ಸೀಜ್ ಮಾಡ್ತೀರಿ ಎಂದು ವಾಗ್ವಾದ ನಡೆಸಿದ್ದಾರೆ.

The post ನಾವೇನು ಕಳ್ಳತನ ಮಾಡಿಲ್ಲ.. ದೇವಸ್ಥಾನಕ್ಕೆ ಹೊರಟಿದ್ವಿ: ಪೊಲೀಸರೊಂದಿಗೆ ಮಹಿಳೆಯರ ವಾಗ್ವಾದ appeared first on News First Kannada.

Source: newsfirstlive.com

Source link