ನಾವ್ಯಾರು ಮತ್ತೆ ಕಾಂಗ್ರೆಸ್​​ ಪಕ್ಷಕ್ಕೆ ಹೋಗುವ ವಿಚಾರವೇ ಇಲ್ಲ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಸ್ಪಷ್ಟೋಕ್ತಿ – We have no intention of going back to Congress: Labour Minister Shivaram Hebbar


ಸೂರ್ಯ, ಚಂದ್ರ ಇರುವರೆಗೂ ಮತ್ತೆ ಸೇರಿಸಿಕೊಳ್ಳಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು. ನಾವೇನು ಅರ್ಜಿ ಹಾಕಿಲ್ಲ, ಅರ್ಜಿ ಹಾಕುವ ಅವಶ್ಯಕತೆ ನಮಗಿಲ್ಲ ಎಂದು ಸಚಿವ ಶಿವರಾಂ ಹೆಬ್ಬಾರ್ ಹೇಳಿದರು. 

ನಾವ್ಯಾರು ಮತ್ತೆ ಕಾಂಗ್ರೆಸ್​​ ಪಕ್ಷಕ್ಕೆ ಹೋಗುವ ವಿಚಾರವೇ ಇಲ್ಲ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಸ್ಪಷ್ಟೋಕ್ತಿ

ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್

ಶಿವಮೊಗ್ಗ: ಯಾರೆಲ್ಲಾ ಬರಬೇಕು ಎಂದು ಹೇಳುವ ಅಧಿಕಾರ ಅವರಿಗುಂಟು. ಯಾರು ಹೋಗಬೇಕು ಎಂದು ಹೇಳುವ ಅಧಿಕಾರ ನಮಗುಂಟು. ನಾವ್ಯಾರು ಮತ್ತೆ ಕಾಂಗ್ರೆಸ್ (Congress)​​ ಪಕ್ಷಕ್ಕೆ ಹೋಗುವ ವಿಚಾರವೇ ಇಲ್ಲ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿಕೆ ನೀಡಿದರು. ನಗರದಲ್ಲಿ ಕಾಂಗ್ರೆಸ್ ತೊರೆದವರನ್ನು ಪುನಃ ಪಕ್ಷಕ್ಕೆ ಅಧ್ಯಕ್ಷ ಡಿ.ಕೆ ಶಿವಕುಮಾರ ಆಹ್ವಾನ ವಿಚಾರವಾಗಿ ಅವರು ಮಾತನಾಡಿದರು. ಸೂರ್ಯ, ಚಂದ್ರ ಇರುವರೆಗೂ ಮತ್ತೆ ಸೇರಿಸಿಕೊಳ್ಳಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು. ನಾವೇನು ಅರ್ಜಿ ಹಾಕಿಲ್ಲ, ಅರ್ಜಿ ಹಾಕುವ ಅವಶ್ಯಕತೆ ನಮಗಿಲ್ಲ ಎಂದು ಸಚಿವ ಶಿವರಾಂ ಹೆಬ್ಬಾರ್ ಹೇಳಿದರು.

ಸುಪ್ರೀಂಕೋರ್ಟ್​ ತೀರ್ಪು ಸ್ವಾಗತಿಸಿದ ಸಚಿವ ಶಿವರಾಂ ಹೆಬ್ಬಾರ್

ಇನ್ನು EWS ಮೀಸಲಾತಿ ಪರ ಸುಪ್ರೀಂಕೋರ್ಟ್​ ತೀರ್ಪು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಮೇಲ್ವರ್ಗದ ಬಡವರಿಗೆ ಮೀಸಲಾತಿ ನೀಡಲು ಮುಂದಾಗಿತ್ತು. ಕೇಂದ್ರ ಶೇ.10ರಷ್ಟು ಮೀಸಲಾತಿ ಜಾರಿಗೊಳಿಸಲು ಮುಂದಾಗಿತ್ತು. ಕೆಲವರು ಇದನ್ನು ವಿರೋಧಿಸಿ ಸುಪ್ರೀಂಕೋರ್ಟ್​ಗೆ ಹೋಗಿದ್ದರು. ಯಾವುದೇ ವರ್ಗದಲ್ಲಿರುವ ಪ್ರತಿ ಬಡವನಿಗೆ ಬದುಕುವ ಹಕ್ಕಿದೆ. ಸುಪ್ರೀಂಕೋರ್ಟ್ ಇದನ್ನು ಸಮರ್ಥಿಸಿಕೊಂಡಿದೆ. ಕರ್ನಾಟಕದಲ್ಲೂ EWS ಮೀಸಲಾತಿ ಅನುಷ್ಠಾನವಾಗಲಿದೆ. ಸುಪ್ರೀಂಕೋರ್ಟ್​​ ಆದೇಶ ಇಡೀ ದೇಶಕ್ಕೆ ಅನ್ವಯಿಸುತ್ತದೆ ಎಂದರು.

ಧಾರವಾಡಕ್ಕೆ ಹೋಗಲು ಕೋರ್ಟ ನಿರ್ಬಂಧ ಹೇರಿದೆ: ಡಿ.ಕೆ.ಶಿವಕುಮಾರ್

ಬೆಳಗಾವಿ: ಪಕ್ಷದ ಸಂಘಟನೆ ದೃಷ್ಠಿಯಿಂದ ನಾಯಕರು, ಅವರ ಅಭಿಮಾನಿಗಳು, ಕಾರ್ಯಕರ್ತರು ಹುಟ್ಟುಹಬ್ಬ ಮಾಡುತ್ತಾರೆ. ಧಾರವಾಡಕ್ಕೆ ಹೋಗಲು ಕೋರ್ಟ ನಿರ್ಬಂಧ ಹೇರಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಹೀಗಾಗಿ ಪಕ್ಕದ ಕ್ಷೇತ್ರದಲ್ಲಿ ಅವರ ಕಾರ್ಯಕ್ರಮ ಮಾಡುತ್ತಿದ್ದಾರೆ. ಬರ್ತಡೇ ಆಚರಣೆಯಲ್ಲಿ ಒಬ್ಬೊಬ್ಬರದು ಒಂದೊಂದು ಶೈಲಿ ಇರುತ್ತೆ. ನಾನು ಕೇದಾರನಾಥಕ್ಕೆ ಹೋಗಿದ್ದೆ, ಇತರರು ಆಸ್ಪತ್ರೆಗೆ ಹೋಗಿ ಹಣ್ಣು ಹಂಪಲ ಕೊಟ್ಟು ಆಚರಿಸುತ್ತಾರೆ. ಆಗಸ್ಟ 3ನೇ ತಾರೀಖು ಸಿದ್ದರಾಮಯ್ಯನವರು ಬರ್ತಡೇಯನ್ನ ಅವರ ಅಭಿಮಾನಿಗಳು ಆಚರಿಸಿದರು. ವಿನಯ್ ಕುಲಕರ್ಣಿ ಎರಡ್ಮೂರು ಬಾರಿ ಶಾಸಕರಾಗಿದ್ದವರು. ಕಾರ್ಯಕರ್ತರ ಭಾವನೆಗೆ ಅನುಗುಣವಾಗಿ ಹುಟ್ಟುಹಬ್ಬ ಆಚರಣೆ ಮಾಡುತ್ತಾರೆ. ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ, ಬೆಳಗಾವಿ ಜಿಲ್ಲೆ ಜವಾಬ್ದಾರಿ ಕೊಟ್ಟಿದ್ದೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.