ಬೆಂಗಳೂರು: ನಮ್ಮ ಸರ್ಕಾರ ಇದ್ದಿದ್ರೆ ನಾನು ಹತ್ತು ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿದೆ. ಆದರೆ ಇವರು ಎರಡು ಕೆಜಿ ಅಕ್ಕಿ ಕೊಡೋಕು ಹೆಣಗಾಡ್ತಿದ್ದಾರೆ. ಏಳು ಕೆಜಿ ಅಕ್ಕಿ ಕೊಟ್ಟರೆ ಇವರಪ್ಪನ ಮನೆ ಗಂಟೇನು ಹೋಗ್ತಿತ್ತು? ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಸವನಗುಡಿಯ ಶ್ರೀನಗರದಲ್ಲಿ ಉಚಿತ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು ನಾನು ಆರಂಭಿಸಿದ ಇಂದಿರಾ ಕ್ಯಾಂಟೀನ್​ನನ್ನು ನಿಲ್ಲಿಸಿ ಬಿಟ್ಟವ್ರೆ ಇವರ ಮನೆ ಹಾಳಾಗ ಎಂದು ತಮ್ಮದೇ ಶೈಲಿಯಲ್ಲಿ ಕಿಡಿ ಕಾರಿದ್ದಾರೆ.

ನಮ್ಮ ಡಾಕ್ಟರ್ ಹೇಳಿದ್ದಾರೆ, ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ ಮೂರನೇ ಅಲೆಯ ಕೊರೊನಾ ಬರಬಹುದು ಎಂದು ಹೇಳಿದ್ದಾರೆ. ಮಕ್ಕಳಿಗೆ ಬರಬಹುದು ಎಂದು ಹೇಳಿದ್ದಾರೆ. ತಜ್ಞರು ಹೇಳಿದ್ರು ಸಹ ಇವರು ಜಾಗೃತೆ ವಹಿಸುತ್ತಿಲ್ಲ. ಈ ದೇಶದಲ್ಲಿ ರಾಜಕಾರಣದ ಸೂರ್ಯ ಇದ್ರೆ ಅದು ಅಂಬೇಡ್ಕರ್ ಮಾತ್ರ. ಉಳಿದವರು ಯಾರು ಸೂರ್ಯನೂ ಅಲ್ಲ ಚಂದ್ರನೂ ಅಲ್ಲ ಎಂದು ತೇಜಸ್ವಿ ಸೂರ್ಯಗೆ ಪರೋಕ್ಷ ಟಾಂಗ್ ಕೊಟ್ಟರು.

The post ‘ನಾ ಆರಂಭಿಸಿದ ಇಂದಿರಾ ಕ್ಯಾಂಟೀನ್​ನನ್ನೇ ನಿಲ್ಲಿಸಿ ಬಿಟ್ಟವ್ರೆ.. ಇವ್ರ ಮನೆ ಹಾಳಾಗ’ appeared first on News First Kannada.

Source: newsfirstlive.com

Source link