ಬಿಗ್‍ಬಾಸ್ ಮನೆಯ ಕ್ಯೂಟ್ ಪೇರ್ ಅಂದರೆ ಅರವಿಂದ್, ದಿವ್ಯಾ ಉರುಡುಗ. ಕಳೆದ ಇನ್ನಿಂಗ್ಸ್ ವೇಳೆ ಈ ಮುದ್ದಾದ ಜೋಡಿ ನಡುವೆ ಇರುವ ಪ್ರೀತಿ, ಹೊಂದಾಣಿಕೆ ಹಾಗೂ ಕಾಳಜಿ ನೋಡಿ ಮನೆಮಂದಿಯೆಲ್ಲಾ ಇವರಿಬ್ಬರು ಒಂದಾದರೆ ಎಷ್ಟು ಚೆಂದ ಎಂದು ಮಾತನಾಡಿಕೊಂಡಿದ್ದರು.

ಇದೀಗ ಚಕ್ರವರ್ತಿ ಚಂದ್ರಚೂಡ್‍ರವರು ಅರವಿಂದ್, ದಿವ್ಯಾ ಬಗ್ಗೆ ತಮಗಿರುವ ಆಸೆಯನ್ನು ಹೊರಹಾಕಿದ್ದಾರೆ. ಎರಡನೇ ಇನ್ನಿಂಗ್ಸ್ ನ 9ನೇ ದಿನ ಬೆಡ್ ರೂಮ್ ಏರಿಯಾದಲ್ಲಿ ಅರವಿಂದ್, ದಿವ್ಯಾ ಉರುಡುಗ, ಚಕ್ರವರ್ತಿ, ಪ್ರಶಾಂತ್ ಸಂಬರಗಿ ಹಾಗೂ ಶಮಂತ್ ಕುಳಿತುಕೊಂಡಿರುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್‍ರವರು ಸಿನಿಮಾ ಕಥೆಯನ್ನು ಹೇಳಿದ್ದಾರೆ.

ಅರವಿಂದ್, ದಿವ್ಯಾ ಉರುಡುಗ ಸಿನಿಮಾ ಮಾಡಬೇಕು. ಇವರಿಬ್ಬರಿಗೂ 10 ನಿಮಿಷದಲ್ಲಿ ಕಥೆ ಕೊಡುತ್ತೇನೆ. ಬೈಕ್ ಮೇಲೆಯೇ ಕಥೆ ಕೊಡುತ್ತೇನೆ. ನಾ ನಿನ್ನ ಮರೆಯಲಾರೆ ರೀತಿ ಇರಬೇಕು. ಎರಡು ತಿಂಗಳು ಇವರಿಬ್ಬರಿಗೂ ಟ್ರೈನಿಂಗ್ ನೀಡಿ ಮಾಡಿದರೆ ಸರಿಯಾಗಿ ಮಾಡಬಹುದು. ನಾನು ಸಿನಿಮಾವನ್ನು ನಿರ್ದೇಶಿಸುತ್ತೇನೆ. ಶಮಂತ್ ಸಂಗೀತಾ ನೀಡುತ್ತಾನೆ. ಪ್ರಶಾಂತ್ ನಿರ್ಮಾಣ ಮಾಡುತ್ತಾನೆ. ಇನ್ನೂ ಸಿನಿಮಾದ ಟೈಟಲ್ ‘ಅರ್ವಿಯಾ’ ಎಂದು ಹೇಳುತ್ತಾರೆ.

ಈ ವೇಳೆ ಶಮಂತ್ ನಾನು ಹೀರೋಯಿನ್ ತಮ್ಮ ಎಂದು ಹೇಳುತ್ತಾರೆ. ಆಗ ಚಕ್ರವರ್ತಿ ಚಂದ್ರಚೂಡ್ ನಾನು ನಿನಗೆ ಕ್ಯಾರೆಕ್ಟರ್ ನೀಡುತ್ತೇನೆ ಸುಮ್ಮನೆ ಇರು ಬಾಯಿ ಮುಚ್ಚಿಸುತ್ತಾರೆ. ಆಗ ಪ್ರಶಾಂತ್ ನಾನು ಹೀರೋ ಅಣ್ಣಾನಾ ಎಂದು ಕೇಳುತ್ತಾರೆ. ಕ್ಯಾರೆಕ್ಟರ್ ಬೇಕೆಂದರೆ ಕಥೆ ಆದ ನಂತರ ನನ್ನ ಬಳಿ ರಿಕ್ವೆಸ್ಟ್ ಮಾಡಿಕೊಂಡರೆ ಕೊಡುತ್ತೇನೆ ಎಂದು ಹೇಳುತ್ತಾ ನಗುತ್ತಾರೆ.

ಸಿನಿಮಾದಲ್ಲಿ ಬಿಗ್‍ಬಾಸ್ ಮನೆಯಲ್ಲಿ ರಿಂಗ್ ನೀಡಿ ಇಬ್ಬರು ಹೇಗೆ ಒಂದಾದರೋ ಅದೊಂದು ಎಪಿಸೋಡ್ ತೆಗೆದುಕೊಳ್ಳಬಹುದು. ನಾನು ಮಾಡೇ ಮಾಡುತ್ತೇನೆ. ಹೊರಗಡೆ ಹೋಗಿದ ತಕ್ಷಣ ನೀವು ಎರಡು ತಿಂಗಳಿನಲ್ಲಿ ರೆಡಿಯಾಗಬೇಕು. ಅರವಿಂದ್‍ಗೆ ಆ್ಯಕ್ಟಿಂಗ್ ಕ್ಲಾಸ್ ನಾನೇ ತೆಗೆದುಕೊಳ್ಳುತ್ತೇನೆ ಅಂತ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ. ಇದನ್ನೂ ಓದಿ:  ನೀನು ನನಗೆ ಅಡ್ವೈಸ್ ಮಾಡಬೇಡ: ನಿಧಿಗೆ ಶುಭಾ ಟಾಂಗ್

The post ನಾ ನಿನ್ನ ಮರೆಯಲಾರೆ ರೀತಿ ತೆರೆಮೇಲೆ ಬರಲಿದ್ಯಾಂತೆ ಅರ್ವಿಯಾ ಸಿನಿಮಾ appeared first on Public TV.

Source: publictv.in

Source link