ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ 21ನೇ ದಿನ ಸಂಜೆ ತಾನು ಹೇಳಿದ ಸೂಚನೆಯನ್ನು ಪಾಲಿಸದ್ದಕ್ಕೆ ಅರವಿಂದ್ ಅವರು ದಿವ್ಯಾ ಉರುಡುಗ ಅವರಿಗೆ ಬೈದಿದ್ದಾರೆ.

ಒಂದು ಸುಳ್ಳು ಎರಡು ನಿಜ ಟಾಸ್ಕ್ ನಲ್ಲಿ ವಿಜಯ ಯಾತ್ರೆ ತಂಡ ಜಯಗಳಿಸಿದ ಬಳಿಕ ಮನೆಯ ಸದಸ್ಯರು ಅಡುಗೆ ಮನೆಯಲ್ಲಿ ಸೇರಿ ಕೆಲಸ ಮಾಡುತ್ತಿದ್ದರು. ದಿವ್ಯಾ ಯು ಅವರು ಕುಳಿತು ಸದಸ್ಯರ ಜೊತೆ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಪ್ರಶಾಂತ್ ಸಂಬರಗಿ ಅವರು ದಿವ್ಯಾ ಅವರನ್ನು ಏಳಿಸಿ ಬೆಡ್ ರೂಮ್ ಕಡೆ ಸ್ಟೆಪ್ ಹಾಕತೊಡಗಿದರು. ಸಂಬರಗಿ ಮಾತನಾಡತ್ತಾ,”ಎಷ್ಟಾದರೂ ನಾನು ನಿನ್ನನ್ನು ಬಿಟ್ಟು ಕೊಡಲ್ಲ” ಎಂದು ಹೇಳಿದಾಗ,”ಜಗಳ ಎಷ್ಟು ಮಾಡಿದ್ರೂ ನಾವು ಮತ್ತೆ ಮಾತನಾಡ್ತೀವಿ. ಎಲ್ಲ ಬೆರಳು ಹೆಬ್ಬೆರಳು ಆಗ್ತಿದೆ” ಎಂದು ಕೇಳಿ ನಕ್ಕರು.

ದಿವ್ಯಾ ನಡೆದುಕೊಂಡು ಹೋಗುವುದನ್ನು ಗಮನಿಸಿದ ಅರವಿಂದ್,”ಒಂದು ಕಡೆ ಕೂರಕ್ಕೆ ಆಗಲ್ವಾ?. ನಾನು ಇನ್ನು ಏನು ಹೇಳಲ್ಲ. ಹೇಗೆ ಬೇಕೋ ಹಾಗೆ ಮಾಡು” ಅಂತ ಬೈದಿದ್ದಾರೆ. ಇದಕ್ಕೆ ಪ್ರಶಾಂತ್ ಸಂಬರಗಿ,”ನಿನ್ನ ಒಳ್ಳೆಯದ್ದಕ್ಕೆ ಹೇಳಿದ್ದು” ಅಂತ ಹೇಳಿ ಅರವಿಂದ್ ಮಾತಿಗೆ ಬೆಂಬಲ ಸೂಚಿಸಿದರು.

ಕುಳಿತ ಬಳಿಕ ಸಂಬರಗಿ ಜೊತೆ,”ಪೊಲೀಸ್ ಆಫೀಸರು ಕೋಪ ಮಾಡ್ಕೋಡಿದ್ದಾರೆ. ಇದನ್ನೆಲ್ಲ ನೋಡಿ ಮನೆಯವರು ನಗ್ತಿದ್ದಾರೆ” ಅಂತ ಅರವಿಂದ್ ಮಾತಿಗೆ ದಿವ್ಯಾ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಕ್ಯೂಟ್ ಮೊಮೆಂಟ್ – ದಿವ್ಯಾ ಹಲ್ಲುಜ್ಜಿದ ಅರವಿಂದ್

ಗಾಯಗೊಂಡಿರುವ ಕಾರಣ ಕೈಯನ್ನು ಕೆಳಗಡೆ ಜಾಸ್ತಿ ಇಡಬೇಡ. ನಡೆಯಬೇಡ ಇದರಿಂದ ಕೈ ನೋವಾಗುತ್ತದೆ ಅಂತ ಅರವಿಂದ್ ದಿವ್ಯಾಗೆ ಸೂಚನೆ ನೀಡಿದ್ದರು. ಆದರೆ ಈ ಸೂಚನೆಯನ್ನು ದಿವ್ಯಾ ಪಾಲಿಸದ್ದಕ್ಕೆ ಅರವಿಂದ್ ಕೇರ್ ಟೇಕರ್ ಆಗಿ ಬೈದಿದ್ದಾರೆ.

ಮೊದಲ ಇನ್ನಿಂಗ್ಸ್ ನಲ್ಲೂ ದಿವ್ಯಾ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲೂ ಸರಿಯಾದ ಸಮಯಕ್ಕೆ ಔಷಧ, ಆಹಾರವನ್ನು ಸೇವಿಸದ್ದಕ್ಕೆ ಅರವಿಂದ್ ದಿವ್ಯಾ ಮೇಲೆ ಸಿಟ್ಟು ತೋರಿಸಿದ್ದರು.

The post ನಿಂಗೆ ಹೇಗೆ ಬೇಕೋ ಹಾಗೆ ಮಾಡು – ಡಿಯುಗೆ ಬೈದ ಅರವಿಂದ್ appeared first on Public TV.

Source: publictv.in

Source link